ಮಂಜೇಶ್ವರ: ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆ ಕೇಶವಗಿರಿ ತೊಟ್ಟೆತ್ತೋಡಿ ಇದರ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಲಾ ಪ್ರಾರಂಭದ ಮುಖ್ಯೋಪಾಧ್ಯಾಯರಾಗಿದ್ದು ನಿವೃತ್ತಾಗಿರುವ ಕೆ.ಅಬ್ದುಲ್ ರಹಿಮಾನ್ ಇವರ ಸ್ವಗೃಹದಲ್ಲಿ ನೆರವೇರಿಸಿದರು. ಶಾಲಾ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ಟಿ.ಕೆ ಸ್ವಾಗತಿಸಿದರು. ಅಮೃತ ಮಹೋತ್ಸವದ ಸಮಿತಿಯ ಅಧ್ಯಕ್ಷ ಮಮ್ಮುಂಞÂ ಹಾಜಿ ಚಿನಾಲ ಇವರು ಕೆ.ಅಬ್ದುಲ್ ರಹಿಮಾನ್ ಇವರನ್ನು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ4 ಅಶ್ವಿನ್ ಕುಮಾರ್ ಕಲ್ಲಗದ್ದೆ, ಹಳೆವಿದ್ಯಾರ್ಥಿ ಸಂಘದ ಉದಯ ಕುಮಾರ್ ಟಿ.ಆರ್., ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಎಸ್.ರಾವ್., ಸಫಿಯಾ ಟೀಚರ್, ಶಿಕ್ಷಕಿ ಜಯಲಕ್ಷ್ಮಿ ಶರತ್ ಶೆಟ್ಟಿ ಈ ಸಂದರ್ಭದಲ್ಲಿ ಹಾರೈಸಿದರು. ವಿದ್ಯಾರ್ಥಿಗಳಾದ ಹಮೀದ್ ಅನ್ಸಾರಿ ಮತ್ತು ಆರಿಫ್ ಉಪಸ್ಥಿತರಿದ್ದರು.
ಅಮೃತಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
0
ಫೆಬ್ರವರಿ 19, 2023
Tags