ಕಾಸರಗೋಡು : ಪಶು ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್‌ಗಳಲ್ಲಿ
ರಾತ್ರಿ ಹೊತ್ತಿನಲ್ಲಿ ಪಶುವೈದ್ಯಕೀಯ ಸೇವೆಗಾಗಿ ದಿನ ವೇತನ ಆಧಾರದಲ್ಲಿ ಪಶುವೈದ್ಯರ
ಹುದ್ದೆ ಖಾಲಿ ಇದೆ. ಅರ್ಹತೆ ಪಶುವೈದ್ಯಕೀಯ ವಿಜ್ಞಾನದಲ್ಲಿ ಪದವಿ ಮತ್ತು
ಪಶುವೈದ್ಯಕೀಯ ಕೌನ್ಸಿಲ್ ನಲ್ಲಿ ನೋಂದಣಿ. ತಿಂಗಳಿಗೆ ಗರಿಷ್ಠ 39,285 ರೂಪಾಯಿ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆಗಳೊಂದಿಗೆ ಫೆಬ್ರವರಿ
20 ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಾಸರಗೋಡು ಸಿವಿಲ್ ಸ್ಟೇಷನ್ ನ ಎ ಬ್ಲಾಕ್
ನಲ್ಲಿರುವ, ಜಿಲ್ಲಾ ಪಶುಪಾಲನಾ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಅರ್ಹತಾ ಪ್ರಮಾಣ
ಪತ್ರಗಳೊಂದಿಗೆ ಹಾಜರಾಗಬೇಕು.
ದೂರವಾಣಿ 04994 255483.