ಕುಂಬಳೆ: ಯಕ್ಷಗಾನದ ಭಾಗವತಿಕೆಯಲ್ಲಿ ವಿಶಿಷ್ಟ ಸಾಂಪ್ರದಾಯಿಕ ಶೈಲಿಯನ್ನಾರಂಭಿಸಿ ತಮ್ಮದೇ ಆದ ಛಾಪನ್ನೊತ್ತಿದ್ದ ಮಹಾನ್ ಭಾಗವತರಾದ ಬಲಿಪ ನಾರಾಯಣ ಭಾಗವತರು ಲಕ್ಷೋಪಲಕ್ಷ ಕಲಾವಿದರ, ಕಲಾಭಿಮಾನಿಗಳ ಹೃದಯಲ್ಲಿ ನೆಲೆಸುವುದಕ್ಕಾಗಿ ತಮ್ಮ ಭೌತಿಕ ಶರೀರದಿಂದ ಬೇರಾಗಿದ್ದಾರೆ. ಭಾಗವತ ಎಂಬ ಪದದ ಅಕ್ಷಗಳ ಮೂರ್ತ ರೂಪವಾದ ಭಗವದ್ಭಕ್ತರಾಗಿ, ವಾಕ್ಯಸಂಪನ್ನತೆಯಿಂದ ಕೂಡಿದವರಾಗಿ ಗರ್ವ ವರ್ಜಿತರಾಗಿ, ತತ್ವನಿರ್ಣಯ ಮಾಡುವುದರಲ್ಲಿ ನಿಸ್ಸೀಮರಾಗಿದ್ದ ಬಲಿಪ ನಾರಾಯಣ ಭಾಗವತರ ನಿಧನ ಕಲಾಲೋಕಕ್ಕೆ ತುಂಬಲಾರದ ನಷ್ಟ ಎಂದು ಕುಂಬಳೆ ಶ್ರೀಕೃಷ್ಣ ಹಿರಿಯ ಮಾಧ್ಯಮ ಶಾಲೆಯ ಸಂಚಾಲಕÀ ಶೇಂತಾರು ನಾರಾಯಣ ಭಟ್ ನುಡಿದರು.
ನಾರಾಯಣಮಂಗಲ ವಿಘ್ನೇಶ್ವರ ಸಂಘದ ಆಶ್ರಯದಲ್ಲಿ ನಡೆದ ಬಲಿಪ ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮದಲ್ಲಿ ದೀಪಬೆಳಗಿಸಿ ಬಲಿಪರ ಭಾವಚಿತ್ರಕ್ಕೆ ಪುμÁ್ಪರ್ಚನೆಗೈದು ಅವರು ಮಾತನಾಡಿದರು.
ವಿಘ್ನೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ್ ಸೂರಂಬೈಲು ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕಂಬಾರು ಕೇಶವ ಭಟ್ ಸ್ವಾಗತಿಸಿದರು. ಡಾ. ಬೇಸೀ ಗೋಪಾಲಕೃಷ್ಣ ಭಟ್, ಭಾಗವತರಾದ ಬೇಂದ್ರೋಡಿ ಗೋವಿಂದ ಭಟ್ ಮೊದಲಾದವರು ನುಡಿನಮನ ಸಲ್ಲಿಸಿದರು. ಗುರುಮೂರ್ತಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಪಂಚವಟಿ ಯಕ್ಷಗಾನ ತಾಳಮದ್ದಳೆ ಜರಗಿತು.
ಭಾಗವತರಾಗಿ ಕಂಬಾರು ಕೇಶವ ಭಟ್, ಬೇಂದ್ರೋಡಿ ಗೋವಿಂದ ಭಟ್, ತಲ್ಪಣಾಣೆ ಶಿವಶಂಕರ ಭಟ್, ದೊಡ್ಡಮಾಣಿ ವಸಂತಕುಮಾರ್, ಹಿಮ್ಮೇಳದಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಬರಕರೆ ವೇಣುಗೋಪಾಲ ಪಡ್ರೆ, ಸೂರ್ಯರಾಯಣ ಪದಕಣ್ಣಾಯ, ಲಕ್ಷ್ಮೀಶ ಬೇಂಗ್ರೋಡಿ, ಲಕ್ಷ್ಮೀಶ ಮಧೂರು, ಕೃಷ್ಣಮೂರ್ತಿ ಪಾಡಿ ಪಾತ್ರವರ್ಗದಲ್ಲಿ ಗೋಪಾಲಕೃಷ್ಣ ನಾಯಕ್ ಸೂರಂಬೈಲು, ನಾರಾಯಣ ಜಿ ಹೆಗಡೆ, ವಿಷ್ಣುಪ್ರಕಾಶ ನೀರ್ಚಾಲು, ಶಿವಾನಂದ ಕುಂಬಳೆ, ಉದಯಶಂಕರ ಭಟ್ ಮಜಲು, ಬಾಲಕೃಷ್ಣ ಆಚಾರ್ಯ ನೀರ್ಚಾಲು, ಡಾ. ಬೇಸೀ ಗೋಪಾಲಕೃಷ್ಣ ಭಟ್, ಸದಾಶಿವ ಮುಳಿಯಡ್ಕ, ಗುರುಮೂರ್ತಿ ನಾಯ್ಕಾಪು ಮೊದಲಾದವರು ಸಹಕರಿಸಿದರು.
ವಿಘ್ನೇಶ್ವರ ಯಕ್ಷಗಾನ ಸಂಘದ ಆಶ್ರಯಲ್ಲಿ ಬಲಿಪರಿಗೆ ನುಡಿನಮನ
0
ಫೆಬ್ರವರಿ 24, 2023
Tags