ಕಾಸರಗೋಡು:ರಾಜ್ಯ ಸರ್ಕಾರ ಸಾರ್ವಜನಿಕ ವಲಯ ಸಂಸ್ಥೆಯಾದ ಹೋರ್ಟಿಕಾರ್ಪ್ ಫ್ರಾಂಚೈಸಿ
ವ್ಯವಸ್ಥೆಯಲ್ಲಿ ಗ್ರಾಮಶ್ರೀ ಹೋರ್ಟಿ ಸ್ಟೋರ್ ಗಳನ್ನು ಪ್ರಾರಂಭಿಸಲು ಅರ್ಜಿ
ಆಹ್ವಾನಿಸಿದೆ. ತರಕಾರಿಗಳಿಗೆ, ಹಣ್ಣುಗಳಿಗೆ ಹೊರತಾಗಿ ಇತರ ಸಾರ್ವಜನಿಕ ವಲಯದ
ಸಂಸ್ಥೆಗಳು/ ಕುಟುಂಬಶ್ರೀ/ ಫಾರ್ಮರ್ಸ್ ಫಾರ್ಮರ್ ಪ್ರೋಡ್ಯೂಸರ್ ಕಂಪನಿ/ ಕೃಷಿ
ಕೂಟ್ಟಂಗಳ್/ ಸಹಕಾರಿ ಸಂಸ್ಥೆಗಳ ಉತ್ಪನ್ನಗಳು ಸಹ ಹೋರ್ಟಿಸ್ಟೋರ್‌ನಲ್ಲಿ
ಲಭ್ಯವಿರುತ್ತದೆ. ಸ್ಟೋರ್ ಕನಿಷ್ಠ 100 ಚದರ ಅಡಿ ವಿಸ್ತೀರ್ಣವನ್ನು
ಹೊಂದಿರಬೇಕು.ಭದ್ರತಾ ಠೇವಣಿಯಾಗಿ ರೂ.25,000 ಪಾವತಿಸಬೇಕು. ಹೋರ್ಟಿಕಾರ್ಪ್
ನಿರ್ದೇಶಿಸುವ ಮಾದರಿಯಲ್ಲಿ ಸ್ಟೋರ್ ಗಳ ವ್ಯವಸ್ಥೆ ಮಾಡಬೇಕು.ಆಸಕ್ತ ಉದ್ಯಮಿಗಳು
ಸಂಪರ್ಕಿಸಿ. ವಿಳಾಸ ವ್ಯವಸ್ಥಾಪಕ ನಿರ್ದೇಶಕರು, ಹಾರ್ಟಿಕಾರ್ಪ್, ಉದಯಗಿರಿ,ಪೂಜಾಪ್ಪುರ
ಪಿ.ಓ, ತಿರುವನಂತಪುರಂ-695012.ದೂರವಾಣಿ 0471 2359651, 9447625776.