ಬೆಂಗಳೂರು: ಕೊಯಂಬತ್ತೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ಎನ್‍ಐಎ ದಾಳಿ ನಡೆಸುತ್ತಿದೆ. ಇಂದು ಬೆಳಗ್ಗೆಯಿಂದ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ದಾಳಿ ಆರಂಭವಾಗಿದೆ.
ಐ.ಎಸ್ ಸಂಪರ್ಕದಲ್ಲಿರುವವರ ಮನೆ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ಒಟ್ಟು 60 ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಸ್ಫೋಟದಲ್ಲಿ ಸಾವಿಗೀಡಾದ ಜಮೇಶಾ ಮುಬಿನ್ ಅವರ ಪತ್ನಿಯ ಹೇಳಿಕೆಯಿಂದ ದೊರೆತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಅಕ್ಟೋಬರ್ 23 ರಂದು ಕೊಯಮತ್ತೂರಿನ ಉಕ್ಕಡಂನಲ್ಲಿರುವ ಕೋಟಾ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟದಲ್ಲಿ ಜಮೇಶ ಮುಬಿನ್ ಸಾವನ್ನಪ್ಪಿದ್ದ. ಕೊಯಮತ್ತೂರಿನಲ್ಲಿ ನಡೆದ ಸ್ಫೋಟ ಆತ್ಮಾಹುತಿ ದಾಳಿ ಎಂಬುದಕ್ಕೆ ಖಚಿತ ಪುರಾವೆ ಸಿಕ್ಕಿದೆ ಎಂದು ಎನ್ ಐಎ ಹೇಳಿಕೆ ನೀಡಿತ್ತು.
ಕೊಯಮತ್ತೂರು ಸ್ಫೋಟ ಪ್ರಕರಣ; ಕೇರಳ ಸೇರಿದಂತೆ ರಾಜ್ಯಗಳಲ್ಲಿ ಎನ್‍ಐಎ ದಾಳಿ
0
ಫೆಬ್ರವರಿ 15, 2023