ಹೌದು ನವಜಾತ ಶಿಶುವಿನಲ್ಲಿ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ. ನಾವು ಮಗುವಿಗೆ ಮುತ್ತಿಕ್ಕಿದಾಗ ಅದಕ್ಕೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ನವಜಾತ ಶಿಶುವಿಗೆ ಏಕೆ ಮುತ್ತಿಕ್ಕಬಾರದು? ಇದರಿಂದ ಉಂಟಾಗುವ ತೊಂದರೆಗಳೇನು ಎಂದು ನೋಡುವುದಾದರೆ:
ಸೋಂಕಾಣು ಸುಲಭವಾಗಿ ಹರಡುವುದು
ಮಗುವನ್ನು ಮುಟ್ಟುವುದು, ಮುತ್ತಿಕ್ಕುವುದು ಮಾಡುವುದರಿಂದ ಸೋಂಕಾಣುಗಳು ಹರಡುವುದು, ಆದ್ದರಿಂದ ನವಜಾತ ಶಿಶುವನ್ನು ಮನೆಯವರೆಲ್ಲಾ ಆಗಾಗ ಮುಟ್ಟುವುದು, ಮುದ್ದು ಮಾಡುವುದು ಮಾಡಬಾರದು.
ಉಸಿರಾಟದ ತೊಂದರೆ ಉಂಟಾಗುವುದು
ಜನಿಸಿದಾಗ ಮಗುವಿನ ಶ್ವಾಸಕೋಶ ತುಂಬಾನೇ ವೀಕ್ ಇರುತ್ತದೆ, ಮೆಚ್ಯೂರ್ ಆಗಲು 8 ವಾರಗಳು ಬೇಕು. ನಮಗೆ ಶೀತ, ಕೆಮ್ಮು ಈಗ ಈ ಬಗೆಯ ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಯಿದ್ದು ಮಗುವಿಗೆ ಮುತ್ತಿಕ್ಕಿದರೆ ಅದಕ್ಕೆ ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
ತ್ವಚೆ ಅಲರ್ಜಿ ಉಂಟಾಗಬಹುದು
ಸೌಂದರ್ಯವರ್ಧಕಗಳು, ಪರ್‌ಫ್ಯೂಮ್ ಇವುಗಳನ್ನು ಹಾಕಿ ಮಗುವನ್ನು ಎತ್ತಿಕೊಳ್ಳಬಾರದು, ಹೀಗೆ ಮಾಡಿದರೆ ಮಗುವಿಗೆ ತ್ವಚೆ ಅಲರ್ಜಿ ಉಂಟಾಗುವುದು.
ಮಾಡಿದರೆ ಮಗುವಿಗೆ ತ್ವಚೆ ಅಲರ್ಜಿ ಉಂಟಾಗುವುದು.
ಫ್ಲೂ, ಜ್ವರ ಹರಡುವುದು
ದೊಡ್ಡವರು ಮಗುವನ್ನು ಎತ್ತಿ ಮುದ್ದಿಸುವುದರಿಂದ ಜ್ವರ, ಫ್ಲೂ ಮಗುವಿಗೆ ಹರಡುವುದು. ಕೆಲವೊಮ್ಮೆ ನಮಗೆ ಜ್ವರ ಇದೆ ಎಂದು ಅನಿಸಿರಲ್ಲ, ಆದರೆ ನಮ್ಮಲ್ಲಿರುವ ಸೋಂಕಾಣು ಮಗುವಿಗೆ ಹರಡಿ ಜ್ವರ ಬರುವುದು. ಆದ್ದರಿಂದ ಚಿಕ್ಕ ಮಗುವನ್ನು ಆದಷ್ಟು ಅದರ ತಾಯಿ ಹಾಗೂ ತಾಯಿ ಮಗುವನ್ನು ಆರೈಕೆ ಮಾಡುತ್ತಿರವವರು ಎತ್ತಿಕೊಳ್ಳುವುದು ಒಳ್ಳೆಯದು.
ನವಜಾತ ಶಿಶುವನ್ನು ಹೇಗೆ ಆರೈಕೆ ಮಾಡಬೇಕು?
ನವಜಾತ ಶಿಶು ಇರುವಾಗ ಮನೆಗೆ ತಂಬಾ ಜನರನ್ನು ಬರಲು ಅನುಮತಿ ನೀಡಬೇಡಿ, ಅವರು ಮನೆಗೆ ಬರುತ್ತೇನೆ ಎಂದು ಹೇಳಿದರೆ ಕನಿಷ್ಠ ಒಂದು ತಿಂಗಳಾದ ಬಳಿಕ ಬರಲು ಹೇಳಿ. ಮನೆಯಲ್ಲಿ ಯಾರಾದರೂ ಹೊರಗಡೆ ಹೋಗಿ ಬಂದರೆ ತಕ್ಷಣ ಮಗುವಿನ ಸಮೀಪ ಹೋಗಬೇಡಿ, ಹೊರಗಡೆ ಕೆಲಸಕ್ಕೆ ಹೋಗುವವರು ಮಗುವಿಗೆ 8 ವಾರಗಳಾಗುವವರೆಗೆ ಎತ್ತಿಕೊಳ್ಳಲು ಹೋಗಬೇಡಿ.
ಶುಚಿತ್ವ ಕಡೆ ಗಮನ ನೀಡಿ
ತಾಯಿ ಹಾಗೂ ಮಗು-ತಾಯಿಯನ್ನು ಆರೈಕೆ ಮಾಡುತ್ತಿರುವವರು ಶುಚಿತ್ವ ಕಡೆಗೆ ಗಮನ ಹರಿಸಬೇಕು. ತಾಯಿ ಮಗುವಿಗೆ ಕಿಸ್ ನೀಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಹೇಳಲಾಗುವುದು. ಆದರೆ ಶೀತ, ಕೆಮ್ಮು ಈ ಬಗೆಯ ಸಮಸ್ಯೆಯಿದ್ದಾಗ ಮಗುವಿಗೆ ಕಿಸ್ ಕೊಡಬೇಡಿ.
ಮಗುವನ್ನು ಎತ್ತುವಾಗ ಮೇಕಪ್ ಬಳಸಬೇಡಿ
ನೀವು ನವಜಾಶ ಶಿಶುವನ್ನು ಎತ್ತುವಾಗ ಮೇಕಪ್ ಅಥವಾ ಪರ್‌ಫ್ಯೂಮ್ ಬಳಸಬಾರದು, ಮಗುವಿನ ತ್ವಚೆಗೆ ತಾಗಿದರೆ ಅಲರ್ಜಿ ಉಂಟಾಗಬಹುದು.
ಯಾರಾದರೂ ಮಗುವನ್ನು ಎತ್ತಿಕೊಳ್ಳಲು ಬಂದರೆ?
ಚಿಕ್ಕ ಮಗುವನ್ನು ನೋಡಿಕೊಂಡು ಹೋಗಲು ನೆಂಟರಿಷ್ಟಾರು ಬಂದೇ ಬರುತ್ತಾರೆ, ಅವರಿಗೆ ಮಗುವಿನ ಎತ್ತಬೇಡಿ ಅಥವಾ ಮುತ್ತಿಕ್ಕಬೇಡಿ ಎಂದು ಹೇಳಿದರೆ ಖಂಡಿತ ಬೇಸರವಾಗುತ್ತೆ, ಹಾಗೆ ಹೇಳುವುದು ಕೂಡ ಸರಿಕಾಣಲ್ಲ. ಆಗ ನೀವು ಅವರ ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು. ಮಗುವಿಗೆ ಶೀತ, ಕೆಮ್ಮು ಉಂಟಾಗಿತ್ತು, ಈಗಷ್ಟೇ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿ. ಅಲ್ಲದೆ ಮಗುವನ್ನು ಎತ್ತಿಕೊಳ್ಳುವಾಗ ಡಾಕ್ಟರ್ ಸ್ಯಾನಿಟೈಸರ್ ಬಳಸಲು ಹೇಳಿದರು ಎಂದು ಹೇಳಿ ಅವರಿಗೆ ಒಂದು ಮಾಸ್ಕ್ ಕೂಡ ಧರಿಸಲು ನೀಡಿ. ಹೀಗೆ ಮಾಡಿದರೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಮಗುವಿಗೆ ಎಲ್ಲಿಗೆ ಕಿಸ್‌ಕೊಡುವುದು ಸುರಕ್ಷಿತ?
ನೀವು ಮಗುವಿನ ಕೆನ್ನೆ, ತುಟಿಗೆ ಕಿಸ್ ಕೊಡಬೇಡಿ, ಹಣೆಗೆ ನೀಡಿ, ಇದರಿಂದ ಸೋಂಕು ಹರಡುವುದು ತಡೆಗಟ್ಟಬಹುದು. ಮಗುವಿನ ತುಟಿಗೆ ಮಾತ್ರ ಮುತ್ತಿಕ್ಕಲೇಬಾರದು.
ಮಗುವಿಗೆ ಮುತ್ತಿಕ್ಕಿದರೆ ಇಷ್ಟವಾಗುವುದೇ?
ಹೌದು ಮಗುವಿಗೆ ಮುತ್ತಿಕ್ಕಿದಾಗ ತುಂಬಾನೇ ಇಷ್ಟಪಡುತ್ತೆ ಅಲ್ಲದೆ ಪೋಷಕರು ಮುತ್ತು ನೀಡುವುದರಿಂದ ತಾಯಿ-ತಂದೆ-ಮಗುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು.
* ಆದರೆ ಶೀತ, ಕೆಮ್ಮು, ಗಂಟಲು ಕೆರೆತ ಈ ಬಗೆಯ ಸಮಸ್ಯೆಯಿದ್ದಾಗ ಮಗುವಿಗೆ ಮುತ್ತಿಕ್ಕಲು ಹೋಗಬೇಡಿ. ನಾವು ಆ ರೀತಿ ಮಾಡಿದರೆ ಮಗು ತುಂಬಾ ತೊಂದರೆ ಅನುಭವಿಸಬೇಕಾಗುವುದು, ಆದ್ದರಿಂದ ನವಜಾತ ಶಿಶುವನ್ನು ತುಂಬಾನೇ ಸುರಕ್ಷಿತವಾಗಿ ನೋಡಿಕೊಳ್ಳಬೇಕು.