HEALTH TIPS

ವಿವಾಹಿತರಾದ ಕೇರಳದ ಮೊದಲ ಟ್ರಾನ್ಸ್‍ಮ್ಯಾನ್ ಬಾಡಿಬಿಲ್ಡರ್: ವಧು ಮಿಸ್ ಮಲಬಾರ್


              ಕೇರಳದ ಮೊದಲ ಟ್ರಾನ್ಸ್‍ಮ್ಯಾನ್ ಬಾಡಿ ಬಿಲ್ಡರ್‍ಗೆ ಮಿಸ್ ಮಲಬಾರ್ ಸೇರಿದ್ದಾರೆ. ಪಾಲಕ್ಕಾಡ್‍ನಲ್ಲಿ ಪ್ರೇಮಿಗಳ ದಿನದಂದು ಟ್ರಾನ್ಸ್‍ಜೆಂಡರ್‍ಗಳಾದ ಪ್ರವೀಣ್ ನಾಥ್ ಮತ್ತು ರಿಶಾನಾ ಐಶು ವಿವಾಹವಾದರು.
          ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.
          ದೇಹದಾಢ್ರ್ಯ ತಾರೆ ಪ್ರವೀಣ್ ಅವರು ಮಿಸ್ಟರ್ ಕೇರಳ 2021 ರಲ್ಲಿ ಟ್ರಾನ್ಸ್‍ಜೆಂಡರ್ ವಿಭಾಗದಲ್ಲಿ ಭಾಗವಹಿಸಿದ್ದರು. 2022 ರಲ್ಲಿ ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಫೈನಲ್ಸ್‍ನಲ್ಲಿ ಸ್ಪರ್ಧಿಸಿದ್ದಾರೆ. ಮಲಪ್ಪುರಂನ ಕೊಟ್ಟಕಲ್ ಮೂಲದ ರಿಶಾನಾ, ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗಾಗಿ ಮಿಸ್ ಮಲಬಾರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. . ರಿಶಾನಾ ತ್ರಿಶೂರ್‍ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವುದರ ಜೊತೆಗೆ ಮಾಡೆಲಿಂಗ್‍ನಲ್ಲಿಯೂ ಸಕ್ರಿಯರಾಗಿದ್ದಾರೆ.
          ಪ್ರವೀಣ್ ಓದಿದ್ದು ಮಹಾರಾಜ ಕಾಲೇಜಿನಲ್ಲಿ. ಟ್ರಾನ್ಸ್ ಕಮ್ಯೂನಿಟಿಗಾಗಿ ಸಹಯಾತ್ರಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಿಶಾನಾಗೆ ಐಶು ಪರಿಚಯವಾಗಿದೆ. ನಂತರ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡರು. ಪ್ರವೀಣನಿಗೆ ಪುರುಷ ದೇಹದೆಡೆಗೆ ಪಯಣ ಕಷ್ಟಗಳಿಂದ ಕೂಡಿತ್ತು. ಹಲವಾರು ಬಾರಿ ಆತ್ಮಹತ್ಯೆಯ ಅಂಚಿನಲ್ಲಿದ್ದಾಗಲೂ ಅವರ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಬದುಕಲು ಪ್ರೇರೇಪಿಸಿತು ಎಂದು ಪ್ರವೀಣ್ ಹೇಳಿದ್ದರು.
         ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಐಶು ಅವರ ಪ್ರಕರಣವೂ ಕಷ್ಟಕರವಾಗಿತ್ತು. ಟ್ರಾನ್ಸ್ ಐಡೆಂಟಿಟಿಯನ್ನು ಸ್ವೀಕರಿಸಲು ಕುಟುಂಬ ಸಿದ್ಧರಿರಲಿಲ್ಲ. ಹೋರಾಟದ ನಂತರ, ಐಶು ಅವರ ಕುಟುಂಬವು ಎಲ್ಲವನ್ನೂ ಗುರುತಿಸಿತು ಮತ್ತು ಒಪ್ಪಿಕೊಂಡಿತು. ಎರಡು ವರ್ಷಗಳ ಸ್ನೇಹ ಮದುವೆಗೆ ಕಾರಣವಾಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries