ಕಾಸರಗೋಡು: ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಎಂ. ರಮಾ ಬಹಿರಂಗಪಡಿಸಿರುವ ಆತಂಕಕಾರಿ ಮಾಹಿತಿ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಜಿಲ್ಲಾಧ್ಯಕ್ಷ ಅಜೀಜ್ ಕಳತ್ತೂರ್ ಆಗ್ರಹಿಸಿದ್ದಾರೆ.
ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ನಡೆಸುತ್ತಿರುವ ಅನೈತಿಕ ಚಟುವಟಿಕೆಗಳಿಂದ ಕಾಲೇಜಿನ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ಚಿತ್ರಿಸುವಂತಾಗಿದೆ. ಕಾಲೇಜಿನ ಬಗ್ಗೆ ಹೊರಬಂದಿರುವ ಆತಂಕಕಾರಿ ಮಾಹಿತಿಯನ್ನು ಪೆÇೀಷಕರು ಮತ್ತು ಸಮಾಜ ಅತ್ಯಂತ ಕಾಳಜಿಯಿಂದ ಪರಿಗಣಿಸುವಂತಾಗಿದೆ. ಯಾವುದಾದರೂ ವಿದ್ಯಾರ್ಥಿ ಸಂಘಟನೆಯಿಂದ ಕ್ಯಾಂಪಸ್‍ನಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ ನಡೆದಿದ್ದಲ್ಲಿ ಕಠಿಣ ಕ್ರಮಕ್ಕೆ ಸಂಬಂಧಪಟ್ಟವರು ಮುಂದಾಗಬೇಕು. ಸತ್ಯಾಸತ್ಯತೆ ಹೊರಬರುವಂತಾಗಲು ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧರಾಗಬೇಕು ಎಂದು ಮುಸ್ಲಿಂ ಯೂತ್ ಲೀಗ್ ಆಗ್ರಹಿಸಿದೆ.
ಪ್ರಾಂಶುಪಾಲೆ ಹೇಳಿಕೆ: ಸಮಗ್ರ ತನಿಖೆಗೆ ಮುಸ್ಲಿಂ ಯೂತ್ ಲೀಗ್ ಆಗ್ರಹ
0
ಫೆಬ್ರವರಿ 25, 2023