ಕುಂಬಳೆ: ಬಂದ್ಯೋಡು ಸಮೀಪದ ಮುಟ್ಟಂ ಸೈಯದ್ ಫಝಲ್ ಕೋಯಮ್ಮ ಅಲ್ಬುಖಾರಿ ಅವರ ನೇತೃತ್ವದಲ್ಲಿ ಧಾರ್ಮಿಕ ಮತ್ತು ಭೌತಿಕ ಏಕೀಕರಣ ಶಿಕ್ಷಣ ಮತ್ತು ದತ್ತಿ ಕ್ಷೇತ್ರದಲ್ಲಿ ಬಹುಮುಖಿ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಖ್ದೂಮಿಯ್ಯ ಶಿಕ್ಷಣ ಕೇಂದ್ರವು ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ 10 ಶೈಕ್ಷಣಿಕ ಉಪಕ್ರಮಗಳು ಎಂಬ ಯೋಜನೆಯಡಿ ಕಾಲೇಜ್ ಆಫ್ ಶರಿಯಾ, ಕಾಲೇಜ್ ಆಫ್ ದವಾಹ್ ತಹ್ಫೀಲ್ ಖುರಾನ್ ರಿಸರ್ಚ್ ಸೆಂಟರ್, ಸೆಕೆಂಡರಿ ಮದ್ರಸಾ, ಹೈಯರ್ ಸೆಕೆಂಡರಿ ಸ್ಕೂಲ್ ಆಫ್ ಅಫ್ಲಲುಲ್ ಉಲಮಾ, ಪಿಎಸ್‍ಸಿ ಕೋಚಿಂಗ್ ಹಬ್, ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಅಹ್ಲುಸ್ಸುನ್ನಾ ಐಡಿಯಲ್ ಕ್ಲಾಸ್ ಇತ್ಯಾದಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.
ಸಂಸ್ಥೆಯು ಒಂದು ದಶಕದ ಸೇವೆ ಪೂರ್ಣಗೊಂಡಿದ್ದು, ದಶಮಾನೋತ್ಸವ ಸಮ್ಮೇಳನ ಫೆ.15 ಮತ್ತು 16ರಂದು ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2 ದಿನಗಳ ದಶಮಾನೋತ್ಸವ ಸಮ್ಮೇಳನದಲ್ಲಿ ಆಧ್ಯಾತ್ಮಿಕ ಸಮ್ಮೇಳನ, ಮುತ್'ಅಲ್ಲಿಮ್ ಶೃಂಗಸಭೆ, ಹಳೆ ವಿದ್ಯಾರ್ಥಿಗಳ ಸಭೆ, ಸಮವಸ್ತ್ರ ವಿತರಣೆ ಮದನಿಯಂ ಮಜ್ ಲಿಸ್, ಸಂಶೋಧನಾ ಕೇಂದ್ರ ಉದ್ಘಾಟನೆ ಸಾಂಸ್ಕøತಿಕ ಸಮ್ಮೇಳನ ಹಿಫ್ಲುಲ್ ಖುರಾನ್ ಸನದುದಾನ, ಸಾಮಾನ್ಯ ಸಭೆ ನಡೆಯಲಿದೆ. ಸಯ್ಯದ್ ಕೆ.ಎಸ್.ಅಟ್ಟಕೋಯ ತÀಂಙಳ್ ಕುಂಬೋಳ್ ಸಮಸ್ತ ಉಪಾಧ್ಯಕ್ಷರು, ಸಯ್ಯದ್ ಫಝಲ್ ಕೋಯಮ್ಮ ಅಲ್ಬುಖಾರಿ ಕುರಾ, ಸಯ್ಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ, ಸೈಯದ್ ಅತ್ವಾವುಲ್ಲಾ ತಂಙಳ್ ಗಾರ್ಡನ್, ಮಾಣಿಕೋತ್ ಅಬ್ದುಲ್ಲಾ ಮುಸ್ಲಿಯಾರ್, ಸಿ. ಮುಹಮ್ಮದ್ ಫೈಝಿ, ಅಬ್ದುರ್ ರಹ್ಮಾನ್ ಸಖಾಫಿ ಮುಂತಾದ ಗಣ್ಯರು ಭಾಗವಹಿಸುವರು. ಜೊತೆಗೆ ಮುಹಮ್ಮದ್ ಅಲಿ ಸಖಾಫಿ ತ್ರಿಕರಿಪುರ, ಅಬ್ದುಲ್ ಹಕೀಂ ಅಝ್ಹರಿ ಕಂಠಪುರಂ, ಸೈಯದ್ ಇಬ್ರಾಹಿಂ ಪೂಕ್ಕುಂಜಿ ತಂಙ|ಳ್ ಕಲ್ಲಕಟ್ಟ, ಸೈಯದ್ ಹಸನುಲ್ ಅಹ್ದಲ್ ತಂಙಳ್ ಮುಹಿಮ್ಮತ್, ಸೈಯದ್ ಅಶ್ರಫ್ ಅಸ್ಸಕಾಫ್ ತಂಙಳ್, ಸೈಯದ್ ಇಂಪಿಚಿಕೋಯ ತಂಙಳ್ ಅಲ್ಬುಖಾರಿ ಬಾಯಾರ್, ಸೈಯದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರು, ಸಯ್ಯದ್ ಹಮ್ಮದ್ ಜಿಸ್ತಿ ಅಜ್ಮೀರ್ ಶರೀಫ್ ರಾಜಸ್ಥಾನ, ಡಾ. ಫಾಝಿಲ್ ರಜ್ವಿ ಕಾವಳಕಟ್ಟೆ ಹಜರತ್, ಮುಫ್ತಿ ಅಶ್ಫಾಕ್ ಮಿಸ್ಬಾಹಿ ಬಿಹಾರ, ಸಯ್ಯದ್ ಅಬ್ದುರ್ರಹ್ಮಾನ್ ಅಲ್ಬುಖಾರಿ ತಮಿಳುನಾಡು, ಮುಹಮ್ಮದ್ ಷರೀಫ್ ನಿಜಾಮಿ ಮಹಾರಾಷ್ಟ್ರ, ಸಯ್ಯದ್ ಅಬ್ದುರ್ರಹ್ಮಾನ್ ಶಹೀರುಲ್ ಬುಖಾರಿ ಪೆÇಸೋಟ್, ಸೈಯದ್ ಜಲಾಲುದ್ದೀನ್ ಸಅದಿ ಅಲ್ಬುಖಾರಿ, ಸಯ್ಯದ್ ಜಲಾಲುದ್ದೀನ್ ತಂಙಳ್ ಉಜಿರೆ, ಸಯ್ಯದ್ ಮುತ್ತುಕೋಯ ತಂಙಳ್ ಕಣ್ಣವಂ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ರಶೀದ್ ಬುಖಾರಿ ಮೊದಲಾದದವರಿಂದ ಉಪನ್ಯಾಸಗಳು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಸುಲೇಮಾನ್
ಕರಿವೆಳ್ಳೂರು, ಮುಹಮ್ಮದ್ ಅಲಿ ಅಹ್ಸನಿ ಉಪ್ಪಳ, ಸೈಯದ್ ಮುಸ್ತಫಾ ತಂಙಳ್ ಮುಟ್ಟಂ, ಅಲಂಕಾರ್ ಮುಹಮ್ಮದ್ ಹಾಜಿ, ಅಬುಬಕರ್ ಕುವೈತ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಇಂದು ಹಾಗೂ ನಾಳೆ ಮಖ್ದೂಮಿಯ್ಯ ಶಿಕ್ಷಣ ಕೇಂದ್ರದಲ್ಲಿ ದಶಮಾನೋತ್ಸವ ಸಮ್ಮೇಳನ
0
ಫೆಬ್ರವರಿ 14, 2023