HEALTH TIPS

ಬೆಲೆಯೇರಿಕೆ, ಇಂಧನ ಸೆಸ್-ವ್ಯಾಪಾರಿಗಳಿಂದ ರಾಜ್ಯವ್ಯಾಪಿ ಪ್ರತಿಭಟನೆ: ವಾಹನಪ್ರಚಾರ ಜಾಥಾಕ್ಕೆ ಚಾಲನೆ

 


             ಕಾಸರಗೋಡು: ಕಿರು ಕೈಗಾರಿಕಾ ವಲಯವನ್ನು ಕಡೆಗಣಿಸಿರುವ ಕೇಂದ್ರ ಹಾಗೂ ರಾಜ್ಯ ಬಜೆಟ್ ಹಾಗೂ ಹೊಸದಾಗಿ ವಿಧಿಸಿರುವ ಇಂಧನ ಸೆಸ್ ವಿರುದ್ಧ ಕೇರಳ ವ್ಯಾಪಾರಿಗಳು ಮತ್ತು ವ್ಯಾಪಾರಿಗಳ ಸಮನ್ವಯ ಸಮಿತಿ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಮುಷ್ಕರದ ಪ್ರಚಾರಾರ್ಥ ಜಾಥಾ ತ್ರಿಕ್ಕರಿಪುರದಿಂದ ಆರಂಭಗೊಂಡಿತು.
         ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ನೇತೃತ್ವದಲ್ಲಿ ನಡೆಯುವ ಜಾಥಾವನ್ನು ಪುದುಚೇರಿ ಟ್ರೇಡರ್ಸ್ ಫೆಡರೇಶನ್ ಅಧ್ಯಕ್ಷ ಕೆ.ಕೆ.ಅನಿಲಕುಮಾರ್ ಉದ್ಘಾಟಿಸಿದರು. ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಸಂಚರಿಸಲಿರುವ ಜಾಥಾ ಫೆ. 25ರಂದು ಕಾಸರಗೋಡಿನಲ್ಲಿ ಸಮಾರೋಪಗೊಳ್ಳಲಿದೆ.
              ಮುಷ್ಕರದ ಮೊದಲ ಹಂತವಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ(ಕೆವಿವಿಇಎಸ್) ರಾಜ್ಯ ಸಮಿತಿಯು ಸೆ.28ರಂದು ಸೆಕ್ರೆಟರಿಯೇಟ್ ಎದುರು ಪ್ರತಿಭಟನಾ ಧರಣಿ ನಡೆಸಲಿದ್ದು, ಇದರ ಪ್ರಚಾರಾರ್ಥ ಜಾಥಾ ಆಯೋಜಿಸಲಾಗುತ್ತಿದೆ.  
ಹೋಟೆಲ್ ಸಿಬ್ಬಂದಿಗೆ ಆರೋಗ್ಯ ಕಾರ್ಡಿನ ಹೆಸರಿನಲ್ಲಿ ವ್ಯಪಾರಿಗಳಿಗೆ ನೀಡುವ ಕಿರುಕುಳ ನಿಲ್ಲಿಸಬೇಕು, ಬೆಲೆ ಏರಿಕೆಗೆ ಕಾರಣವಾಗುವ ಇಂಧನ ಸೆಸ್ ಹಿಂಪಡೆಯಬೇಕು, 1600 ರೂ.ನಿಂದ 1300 ರೂ.ಗೆ ಕಡಿತಗೊಂಡ ವರ್ತಕರ ಕಲ್ಯಾಣ ನಿಧಿ ಪಿಂಚಣಿ ಮರುಸ್ಥಾಪಿಸಬೇಕು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಪಟ್ಟಣಗಳಲ್ಲಿ ಅಂಡರ್‍ಪ್ಯಾಸೇಜ್ ಮತ್ತು ಮೇಲ್ಸೇತುವೆ ನಿರ್ಮಿಸಬೇಕು,  ಹೊರಹಾಕಲ್ಪಟ್ಟ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು,  ಜಿಎಸ್‍ಟಿ ಹೆಸರಿನಲ್ಲಿ ನಡೆಯುತ್ತಿರುವ ವರ್ತಕರ ದಬ್ಬಾಳಿಕೆಗೆ ಕಡಿವಾಣಹಾಕಬೇಕು,  ಕಟ್ಟಡ ತೆರಿಗೆ, ವಿದ್ಯುತ್ ಶುಲ್ಕ, ನೀರಿನ ದರ ಹೆಚ್ಚಳವನ್ನು ಹಿಂಪಡೆಯಬೇಕು ಮುಂತಾದ ಬೇಡಿಕೆ ಮುಂದಿರಿಸಿ ಪ್ರತಿಭಟನಾ ಧರಣಿ ನಡೆಯಲಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries