ಕಾಸರಗೋಡು: ಮಧೂರು ಗ್ರಾಮ ಪಂಚಾಯಿತಿಯ 14ನೇ ಪಂಚವಾರ್ಷಿಕ ಯೋಜನಾ ಅಭಿವೃದ್ಧಿ ವಿಚಾರ ಸಂಕಿರಣ ಉಳಿಯತ್ತಡ್ಕದ ಅಟಲ್ ಸಭಾಂಗಣದಲ್ಲಿ ಜರುಗಿತು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ.ಎ ಸೈಮಾ ಕಾರ್ಯಕ್ರಮ ಉದ್ಘಾಟಿಸಿದರು.
ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ ಎಸ್ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ಬ್ಲಾಕ್ ಪಂಚಾಯಿತಿ ಸದಸ್ಯರಾದ ಸುಕುಮಾರ ಕುದುರೆಪಾಡಿ, ಜಮೀಲಾ ಅಹಮ್ಮದ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಶ್ರೀಮತಿ, ನಾಸೀರಾ, ಕೆ. ಉದಯ ಕುಮಾರ್, ಹನೀಫ ಅರಂತೋಡ್, ಎಂ. ಅಬ್ದುಲ್ ಜಲೀಲ್, ಹಬೀಬ್ ಚೆಟ್ಟುಂಗುಳಿ, ಸ್ಮಿತಾ ಸುಧಾಕರನ್, ಉಷಾ ಸುರೇಶ್, ಕೆ. ಸೌಮ್ಯಾ. ರಾಧಾ ಕೆ.ಪಚ್ಚಕ್ಕಾಡ್, ಬಶೀರ್, ಅಂಬಿಲಿ, ಸಿ.ಎಚ್.ಉದಯ ಕುಮಾರ್, ಸಿಡಿಎಸ್ ಅಧ್ಯಕ್ಷೆ ಕೆ.ಸುಮಾ ಉಪಸ್ಥಿತರಿದ್ದರು. ಮಧೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪಿ. ಜ್ಯೋತಿಶ್ ಸ್ವಾಗತಿಸಿದರು. ಯೋಜನಾ ಗುಮಾಸ್ತ ಪಿ. ಜಯಂತಿ ವಂದಿಸಿದರು.
ಮಧೂರು ಗ್ರಾಪಂ-ಪಂಚವಾರ್ಷಿಕ ಯೋಜನೆ ಅಭಿವೃದ್ಧಿ ವಿಚಾರ ಸಂಕಿರಣ
0
ಫೆಬ್ರವರಿ 28, 2023