HEALTH TIPS

ಬಗೆಹರಿಯದ ಸಮಸ್ಯೆ: ಗನ್​ ಪಾಯಿಂಟ್​ನಲ್ಲಿ ಸರ್ಕಾರಿ ಉದ್ಯೋಗಿಗಳನ್ನು ಒತ್ತೆಯಾಳಾಗಿರಿಸಿಕೊಂಡ ಯುವಕ!

 

             ತಿರುವನಂತಪುರಂ: ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದಕ್ಕೆ ಯುವಕನೊಬ್ಬ ಗ್ರಾಮ ಪಂಚಾಯಿತಿ ಸರ್ಕಾರಿ ಉದ್ಯೋಗಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ಕೇರಳದ ವೆಂಗನೂರ್​ ಗ್ರಾಮದಲ್ಲಿ ನಡೆದಿದೆ.

                   ಅಮರಾವಿಲಾ ಮೂಲದ ಮುರುಕನ್​ (33) ಗನ್​ನೊಂದಿಗೆ ಪಂಚಾಯಿತಿ ಕಚೇರಿಗೆ ಬಂದು ಎಲ್ಲರನ್ನು ಒತ್ತೆಯಾಳಾಗಿ ಇರಿಸಿಕೊಂಡರು.

ನಮಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ದೂರಿದ ಯುವಕ ಸಮಸ್ಯೆ ಬಗೆಹರಿಸದಿದ್ದರೆ ಫೈರಿಂಗ್​ ಮಾಡುವುದಾಗಿ ಗನ್​ ತೋರಿಸಿ ಬೆದರಿಕೆ ಹಾಕಿದನು. ಬಳಿಕ ಉದ್ಯೋಗಿಗಳನ್ನು ಕಚೇರಿ ಒಳಗೆ ಕೂಡಿ ಹಾಕಿ ಹೊರಗಿನಿಂದ ಬಾಗಿಲು ಬಂದ್​ ಮಾಡಿದನು.

              ಫೆ.21 ಬೆಳಗ್ಗೆ 11 ಗಂಟೆ ಸುಮಾರಿಗೆ ಮುರುಕನ್​ ಗನ್​ ಹಿಡಿದು ಕಚೇರಿಗೆ ಬಂದನು. ಕಾಲುವೆಯಿಂದ ಕುಡಿಯುವ ನೀರು ಸಿಗುತ್ತಿಲ್ಲ ಎಂಬುದು ಆತನ ದೂರು ಆಗಿತ್ತು. ಗನ್​ ಮಾತ್ರವಲ್ಲದೆ, ನೀರನ್ನು ಬಿಡುಗಡೆ ಮಾಡದ ಪಂಚಾಯಿತಿಯನ್ನು ಮುಚ್ಚಿ ಎಂಬ ಬರಹ ಇರುವ ಭಿತ್ತಿ ಫಲಕದೊಂದಿಗೆ ಕಚೇರಿಗೆ ಆಗಮಿಸಿದ್ದನು.

                       ಮುರುಕನ್ ಮಾತನಾಡಿ, ವೆಂಗನೂರು ಪಂಚಾಯಿತಿಗೆ ಕಾಲುವೆ ನೀರು ಬರದೇ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ನಂತರ ಪ್ರತಿಭಟನೆಗೆ ಬಂದ ಮುರುಕನ್ ಪಂಚಾಯಿತಿ ಕಚೇರಿಯ ಗೇಟ್‌ಗೆ ಬೀಗ ಹಾಕಿದರು. ಉದ್ಯೋಗಿಗಳನ್ನು ಕೂಡಿ ಹಾಕಿ ಗನ್​ನಿಂದ ಬೆದರಿಕೆ ಹಾಕಿದರು. ಬಳಿಕ ಮಾಹತಿ ತಿಳಿದು ಪೊಲೀಸರು ಆಗಮಿಸಿ ಆತನಿಂದ ಬಂದೂಕನ್ನು ವಶಪಡಿಸಿಕೊಂಡು ಒತ್ತೆಯಾಳಾಗಿದ್ದ ನೌಕರರನ್ನು ಬಿಡುಗಡೆಗೊಳಿಸಿದರು. ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries