ಕಾಸರಗೋಡು: ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರದ ಆಶ್ರಯದಲ್ಲಿ ಶ್ರೀ ಪುರಂದರದಾಸ ಶ್ರೀ ತ್ಯಾಗರಾಜ ಸ್ವಾಮಿ, ಶ್ರೀ ಹರಿಕೇಶ ನಲ್ಲೂರು ಮುತ್ತಯ್ಯ ಭಾಗವತರ 19ನೇ ಸಂಕೀರ್ತನಾರಾಧನೋತ್ಸವ ಕಾಸರಗೋಡು ಪೇಟೆ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ ವ್ಯಾಸಮಂಟಪದಲ್ಲಿ ಜರುಗಿತು.
ಡಾ. ಶಂಕರ್‍ರಾಜ್ ಸಮಾರಂಭ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಅವರಿಂದ ಸಂಗೀತಾರ್ಚನೆ ನಡೆಯಿತು. ಹಿರಿಯ ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರಿಂದ ಪುರಂದರ ದಾಸ ಸಂಗೀತ ರೂಪಕ ಜರುಗಿತು. ಎರಡನೇ ದಿನದಂದು ಟಿ.ಪಿ ಶ್ರೀನಿವಾಸನ್ ದೀಪ ಪ್ರಜ್ವನಲೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶ್ರೀ ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೀರ್ತನಾರ್ಚನೆ ನಡೆಯಿತು. ಪ್ರಸಿದ್ಧ ವಯಲಿನ್ ವಿದುಷಿಗಳಾದ ಅಕ್ಕರೆ ಸಹೋದರಿಯರಾದ ಎಸ್. ಸಉಬ್ಬಲಕ್ಷ್ಮೀ-ಎಸ್. ಸ್ವರ್ಣಲತಾ ಅವರಿಂದ ಪಿಟೀಲು ದವಂದ್ವ ವಾದನ ಜರುಗಿತು. ಪಕ್ಕವಾದ್ಯದಲ್ಲಿ ವಿದ್ವಾನ್ ಆರ್. ಶಂಕರನಾರಾಯಣನ್ ಮೃದಂಗ, ವಾಳಪಳ್ಳಿ ಕೃಷ್ಣಕುಮಾರ್ ಘಟಂನಲ್ಲಿ ಸಹಕರಿಸಿದರು.
ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಸಂಕೀರ್ತನಾರಾಧನೋತ್ಸವ
0
ಫೆಬ್ರವರಿ 12, 2023
Tags