ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭ ದಾನಿಗಳಿಂದ ಕೊಡುಗೆಯಾಗಿ ನೀಡಲಾದ ವಿವಿಧ ಕೊಡುಗೆಗಳ ಉದ್ಘಾಟನೆ ನೆರವೇರಿತು.
ಉದ್ಯಮಿ ಸತೀಶ್‍ರಾವ್ ದಂಪತಿ ಎಡನೀರು ಅವರ ಕೊಡುಗೆಯನ್ವಯ ಎಡನೀರಿನ ಮುಖ್ಯ ರಸ್ತೆ ಅಂಚಿಗೆ ನಿರ್ಮಿಸಲಾದ ಮಹಾದ್ವಾರದ ಉದ್ಘಾಟನೆ, ಉಮೇಶ್ ಕುಮಾರ್ ಎಡನೀರು ಕೊಡುಗೆಯಾಗಿ ನಿರ್ಮಿಸಲಾದ ಶ್ರೀದೇವರ ಕಟ್ಟೆ ಹಾಗೂ ಶ್ರೀ ತಾರಾ ಸುಧೀಂದ್ರ ಮುಂಬೈ ಕೊಡುಗೆಯಾಗಿ ನೀಡಿದ ಉತ್ಸವ ಮೂರ್ತಿಯ ಸಮರ್ಪಣಾ ಕಾರ್ಯ ಈ ಸಂದರ್ಭ ನೆರವೇರಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಉಪ್ಪಳ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ, ಹೊಸದುರ್ಗ ಶಾಸಕ ಇ.ಚಂದ್ರಶೇಖರನ್ ನೂತನ ದ್ವಾರ ಉದ್ಘಾಟಿಸಿದರು. ಈ ಸಂದರ್ಭ ಟಿ. ಶ್ಯಾಂ ಭಟ್ ಬೆಂಗಳೂರು, ದಾನಿಗಳು, ಶ್ರೀಮಠದ ಅಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀ ಎಡನೀರು ಮಠದ ನೂತನ ಮಹಾದ್ವಾರ, ದೇವರಕಟ್ಟೆ ಸಮರ್ಪಣೆ
0
ಫೆಬ್ರವರಿ 17, 2023
Tags