ತಿರುವನಂತಪುರ: ಪ್ರತಿತಿಂಗಳ ಒಂದನೇ ತಾರೀಕಿನಂದು ಬಾರ್ ಗಳ ಮೇಲೆ ಹೇರಿರುವ ಡ್ರೈ ಡೇ ಅವೈಜ್ಞಾನಿಕವಾಗಿದ್ದು, ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಬಾರ್ ಮಾಲೀಕರು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಮದ್ಯ ನೀತಿ ರಚನೆಗೂ ಮುನ್ನ ಸಚಿವ ಎಂ.ಬಿ.ರಾಜೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಾರ್ ಮಾಲೀಕರು ಈ ವಿಷಯ ಪ್ರಸ್ತಾಪಿಸಿದರು.
ಈಗಿರುವ ಬಾರ್ ಅವಧಿಯನ್ನು ಬೆಳಗ್ಗೆ 8ರಿಂದ ರಾತ್ರಿ 11ರ ವರೆಗೂ ಬದಲಿಸಬೇಕು ಹಾಗೂ ಐಟಿ ವಲಯದ ಬಾರ್ ಗಳಲ್ಲಿ ರಾತ್ರಿ ಪೂರ್ತಿ ತೆರೆಯಲು ಅನುಮತಿಸಬೇಕು ಎಂದು ಬಾರ್ ಮಾಲೀಕರು ಆಗ್ರಹಿಸಿದ್ದಾರೆ. ಮುಂದೆ ಸರಕಾರದೊಂದಿಗೆ ಸಮಾಲೋಚಿಸಿ ಹೇಳುತ್ತೇನೆ ಎಂದು ಬಾರ್ ಮಾಲೀಕರಿಗೆ ಸಚಿವರು ಭರವಸೆ ನೀಡಿರುವರು.
ಒಂದನೇ ತಾರೀಖಿನಂದು ಜಾರಿಯಲ್ಲಿರುವ ಡ್ರೈ ಡೇ ಬದಲಾಯಿಸುವಂತೆ ಬಾರ್ ಮಾಲೀಕರಿಂದ ಸರ್ಕಾರಕ್ಕೆ ಮನವಿ
0
ಫೆಬ್ರವರಿ 23, 2023