ಕೊಚ್ಚಿ: ಟೆಲಿಗ್ರಾಮ್ನಲ್ಲಿ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳಿಗೆ ಯಾವುದೇ ಕಡಿವಾಣ ಇಲ್ಲ. ಈ ವೇದಿಕೆಯಲ್ಲಿ ಪೋರ್ನ್ ವಿಡಿಯೋಗಳ ಮಾರಾಟ, ಶೇರಿಂಗ್ ನಿರಂತರವಾಗಿ ನಡೆಯುತ್ತಲೇ ಇದೆ. ಕೆಲವು ಗ್ಯಾಂಗ್ಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ.
ಅಪ್ರಾಪ್ತ ಮಕ್ಕಳ ಬೆತ್ತಲೆ ವಿಡಿಯೋಗಳನ್ನು ಹರಿಬಿಟ್ಟು ಯುವ ಪೀಳಿಗೆಯನ್ನು ತಮ್ಮ ಜಾಲಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಆ ಜಾಲಕ್ಕೆ ಸಿಲುಕಿದರೆ ಜೈಲು ಶಿಕ್ಷೆ ಫಿಕ್ಸ್ ಎಂಬುದನ್ನು ಮರೆಯಬೇಡಿ. ಏಕೆಂದರೆ, ಪೊಲೀಸ್ ಇಲಾಖೆ ಟೆಲಿಗ್ರಾಮ್ ಮೇಲೆ ಹದ್ದಿನ ಕಣ್ಣು ಇಟ್ಟಿದೆ.
ಟೆಲಿಗ್ರಾಮ್ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಸಂಗ್ರಹಿಸಿ ಇಟ್ಟಿದ್ದ ಯುವಕನನ್ನು ಕೇರಳದ ಅಂಟಿಕಾಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೆಬಿನ್ ಥಾಮಸ್ (26) ಎಂದು ಗುರುತಿಸಲಾಗಿದೆ. ಈತ ಈ ಮೊದಲು ಅರುನಾಟ್ಟುಕರಾದಲ್ಲಿ ವಾಸಿವಿದ್ದನು. ಈಗ ವರಿಯಂ ರಸ್ತೆ ಬಳಿಯ ಪುಲಿಕ್ಕನ್ ಮೂಲಂಕುಲಂ ಮನೆಯಲ್ಲಿದ್ದಾನೆ.
ಮಕ್ಕಳ ಬೆತ್ತಲೆ ವಿಡಿಯೋಗಳೇ ತುಂಬಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಟೆಲಿಗ್ರಾಮ್ ಗ್ರೂಪ್‌ಗಳಲ್ಲಿ ಮಕ್ಕಳ ನಗ್ನ ಚಿತ್ರಗಳನ್ನು ಶೇರ್ ಮಾಡುವ ಒಂದು ದೊಡ್ಡ ಗ್ಯಾಂಗ್ ಇದೆ. ಅವರು ಈ ಗುಂಪುಗಳಲ್ಲಿ ಮಕ್ಕಳ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಹಣವನ್ನು ಪಡೆದು ಅಗತ್ಯ ಇರುವವರಿಗೆ ಮಾರಾಟ ಮಾಡುತ್ತಾರೆ. ಆರೋಪಿ ಸೆಬಿನ್ ಅಂತಹ ಗುಂಪಿನಿಂದ ಮಕ್ಕಳ ನಗ್ನ ವಿಡಿಯೋಗಳು ಮತ್ತು ಚಿತ್ರಗಳನ್ನು ಖರೀದಿಸಿ ಸಂಗ್ರಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಐಶ್ವರ್ಯ ಡೋಂಗ್ರೆ ಅವರಿಗೆ ದೊರೆತ ಖಚಿತ ಸುಳಿವಿನ ಮೇರೆಗೆ ಇರಿಂಗಲಕುಡ ಡಿವೈಎಸ್ಪಿ ಬಾಬು ಕೆ ಥಾಮಸ್ ಅವರ ಸೂಚನೆ ಮೇರೆಗೆ ಅಂಟಿಕಾಡ್ ಇನ್ಸ್‌ಪೆಕ್ಟರ್ ಪಿ.ಕೆ.ದಾಸ್, ಎಸ್‌ಐ ಐಶ್ವರ್ಯ, ಎಎಸ್‌ಐ ಅರುಣ್‌ಕುಮಾರ್, ಪೊಲೀಸರಾದ ಮುರುಕದಾಸ್ ಮತ್ತು ಸಹದ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದೆ.