HEALTH TIPS

ಥೈರಾಯ್ಡ್ ಗ್ರಂಥಿ ಸರ್ಜರಿ ಮಾಡಿದರೆ ತೆಗೆದರೆ ಪ್ರಯೋಜನಗಳೇನು, ಅಡ್ಡಪರಿಣಾಮವಿದೆಯೇ?

 ನಮ್ಮ ಗಂಟಲಿನಲ್ಲಿ ಥೈರಾಯ್ಡ್‌ ಗ್ರಂಥಿ ಇರುತ್ತದೆ, ಅದು ಚಿಟ್ಟೆಯಾಕಾರದಲ್ಲಿರುತ್ತದೆ, ಇದು ನಮ್ಮ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಥೈರಾಯ್ಡ್‌ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಈ ಥೈರಾಯ್ಡ್‌ ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ ತೊಂದರೆಯಾದರೆ ಥೈರಾಯ್ಡ್‌ ಸಮಸ್ಯೆ ಉಂಟಾಗುವುದು.

ಥೈರಾಯ್ಡ್ ಸಮಸ್ಯೆ ಬಂದಾಗ ಮಾತ್ರೆ ನೀಡಿ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಬಹುದು, ಕೆಲವರಿಗೆ ಸರ್ಜಿರಿ ಮಾಡಿ ಆ ಗ್ರಂಥಿಯನ್ನು ತೆಗೆಯಲು ವೈದ್ಯರು ಸೂಚಿಸುತ್ತಾರೆ.

ಥೈರಾಯ್ಡ್ ಗ್ರಂಥಿ ತೆಗೆಯುವುದರಿಂದ ಉಂಟಾಗುವ ಪ್ರಯೋಜನಗಳೇನು, ತೆಗೆದ ಮೇಲೆ ಉಂಟಾಗುವ ಅಡ್ಡಪರಿಣಾಮಗಳೇನು ಎಂಬುವುದನ್ನು ಈ ಲೇಖನದ ಮೂಲಕ ತಿಳಿಯೋಣ:

ಮೊದಲಿಗೆ ಥೈರಾಯ್ಡ್ ಗ್ರಂಥಿಯ ಕಾರ್ಯಗಳ ಬಗ್ಗೆ ನೋಡೋಣ

ಥೈರಾಯ್ಡ್ ಹಾರ್ಮೋನ್‌ಗಳು ನಮ್ಮ ದೇಹದ ತೂಕ, ಚಯಪಚಯ ಕ್ರಿಯೆ, ಹೃದಯದ ಆರೋಗ್ಯ ಕಾಪಾಡಲು ತುಂಬಾನೇ ಅವಶ್ಯಕ. ಸ್ನಾಯುಗಳು ಹಾಗೂ ಮೂಳೆಯ ಆರೋಗ್ಯಕ್ಕೆ ಕೂಡ ತುಂಬಾನೇ ಅವಶ್ಯಕ.

ಥೈರಾಯ್ಡ್ ಗ್ರಂಥಿ ತೆಗೆಯುವುದರಿಂದ ದೊರೆಯುವ ಪ್ರಯೋಜನಗಳು

* ಥೈರಾಯ್ಡ್‌ ಗ್ರಂಥಿ ಹಾಗೇ ಇದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ

* ಥೈರಾಯ್ಡ್ ಗ್ರಂಥಿ ಊದಿಕೊಂಡರೆ ಆಹಾರ ನುಂಗಲು, ಉಸಿರಾಡಲು ತೊಂದರೆಯಾಗುವುದು, ಧ್ವನಿಯಲ್ಲೂ ಬದಲಾವಣೆಯಾಗುವುದು.

* ಯಾರಿಗೆ ಹೈಪರ್ ಥೈರಾಯ್ಡ್ ಇದೆಯೋ ಯಾವುದೇ ಚಿಕಿತ್ಸೆ ಪ್ರಯೋಜನವಾಗುವುದಿಲ್ಲ, ಆದ್ದರಿಂದ ಥೈರಾಯ್ಡ್ ಗ್ರಂಥಿ ತೆಗೆದರೆ ಒಳ್ಳೆಯದು

ಥೈರಾಯ್ಡ್ ಗ್ರಂಥಿ ತೆಗೆಯುವ 3 ಚಿಕಿತ್ಸೆಗಳಿಂದರೆ

ಹೆಮಿಥೈರಾಯ್ಡೋಕ್ಟೊಮಿ ಅಥವಾ ಲೋಬೆಕ್ಟೊಮಿ (Hemithyroidectomy, or lobectomy: ಇದರಲ್ಲಿ ಒಂದು ಲೊಬೆ ಅಥವಾ ಅರ್ಧ ಥೈರಾಯ್ಡ್‌ ಗ್ರಂಥಿ ತೆಗೆಯಯಲಾಗುವುದು. ಕ್ಯಾನ್ಸರ್ ಅಪಾಯ ಕಡಿಮೆ ಇದ್ದರೆ ಒಂದು ಭಾಗವಷ್ಟೇ ತೆಗೆಯಲಾಗುವುದು.

* ಇಸ್ತೆಮ್ಯೂಸೆಕ್ಟೊಮಿ (Isthmusectomy):ಈ ಚಿಕಿತ್ಸೆಯಲ್ಲಿ ಥೈರಾಯ್ಡ್‌ ಗ್ರಂಥಿಯಲ್ಲಿರುವ ಚಿಕ್ಕ ಗಡ್ಡೆಯನ್ನು ಮಾತ್ರ ತೆಗೆಯಲಾಗುವುದು.

* ಟೋಟಲ್‌ ಥೈರಾಯ್ಡೋಕ್ಟೊಮಿ (Total thyroidectomy): ಇದರಲ್ಲಿ ಸಂಪೂರ್ಣ ಥೈರಾಯ್ಡ್ ಗ್ರಂಥಿಯನ್ನು ತೆಗೆದು ಹಾಕಲಾಗುವುದು. ಥೈರಾಯ್ಡ್ ಕ್ಯಾನ್ಸರ್ ಆಗುವ ಸಾಧ್ಯತೆ ಇದ್ದರೆ ಅಥವಾ ಥೈರಾಯ್ಡ್ ಗ್ರೇವ್ ಆಗಿದ್ದಾಗ ಸಂಪೂರ್ಣವಾಗಿ ತೆಗೆದು ಹಾಕಲಾಗುವುದು.

ಥೈರಾಯ್ಡ್ ಗ್ರಂಥಿ ತೆಗೆದರೆ ಅಡ್ಡಪರಿಣಾಮಗಳೇನು?

* ಸೋಂಕು

* ರಕ್ತಸ್ರಾವ

* ಧ್ವನಿಪೆಟ್ಟಿಗೆಯಲ್ಲಿ ಗಾಯ

* ಪ್ಯಾರಾಥೈರಾಯ್ಡ್ ಗ್ರಂಥಿಗೆ ಹಾನಿಯಾಗಬಹುದು

ಆಹಾರದಲ್ಲಿರುವ ಕ್ಯಾಲ್ಸಿಯಂ ಹೀರಿಕೊಳ್ಳಲು ಪ್ಯಾರಾಥೈರಾಯ್ಡ್‌ ಗ್ರಂಥಿ ಅವಶ್ಯಕ.

ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು?

ಸರ್ಜರಿ ಆದ ಒಂದು ದಿನದಲ್ಲಿ ಎದ್ದು ಓಡಾಡಬಹುದು, ವೈದ್ಯರು ಕೆಲವು ವಾರ ವಿಶ್ರಾಂತಿ ಪಡೆಯಲು ಸೂಚಿಸುತ್ತಾರೆ.

* ಕೆಲವರಿಗೆ ಕೆಲವು ವಾರಗಳವರೆಗೆ ನೋವು ಇರುತ್ತದೆ, ನೋವು ತುಂಬಾ ಇದ್ದರೆ ವೈದ್ಯರು ನೋವು ನಿವಾರಕ ನೀಡಬಹುದು.

ಥೈರಾಯ್ಡ್ ಸರ್ಜರಿ ಆದ ಬಳಿಕ ಥೈರಾಯ್ಡ್ ಹಾರ್ಮೋನ್‌ ಹಾಗೂ ಕ್ಯಾಲ್ಸಿಯಂ ಅನ್ನು ನಿಯಮಿತವಾಗಿ ಪರೀಕ್ಷೆ ಮಾಡುತ್ತಾ ಇರಬೇಕು.


 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries