ನವದೆಹಲಿ: ಬಿಜೆಪಿ ದೇಶದಾದ್ಯಂತ ಸೂಫಿಸಂತರ ಸಮಾವೇಶ ನಡೆಸಲು ಯೋಜಿಸುತ್ತಿದೆ. ಸಮಾವೇಶದಲ್ಲಿ ಹಜರತ್ ನಿಜಾಮುದ್ದೀನ್, ಅಜ್ಮೀರ್ ಷರೀಫ್, ಬರೇಲಿ ಷರೀಫ್ ದರ್ಗಾದಂತಹ ಧಾರ್ಮಿಕ ಕೇಂದ್ರಗಳ ಸೂಫಿ ನಾಯಕರು ಇರುವ ಸಾಧ್ಯತೆಯಿದೆ.
ಪಕ್ಷದ ಅಲ್ಪಸಂಖ್ಯಾತ ವಿಭಾಗವು ಮಾರ್ಚ್‌ನಲ್ಲಿ 'ಸೂಫಿ ಸಂತರ ಸಂವಾದ' ಹೆಸರಿನಲ್ಲಿ ಸಮಾವೇಶವನ್ನು ನಡೆಸಲಿದೆ ಎಂದು ಈ ಪ್ರಕ್ರಿಯೆಯಲ್ಲಿ ತೊಡಗಿರುವ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.