ತಿರುವನಂತಪುರಂ: ಮಹಿಳೆಯರ ಶಬರಿಮಲೆ ಎಂದೇ ಪ್ರಸಿದ್ದವಾಗಿರುವ ಅಟ್ಟುಕ್ಕಾಲ್ ಭಗವತಿ ದೇವಸ್ಥಾನದಲ್ಲಿ ಈ ವರ್ಷದ ಪೊಂಗಾಲ ಉತ್ಸವ ನಾಳೆಯಿಂದ(ಸೋಮವಾರ) ಆರಂಭವಾಗಲಿದೆ.
ಮಾರ್ಚ್ 7 ರಂದು ಬೆಳಿಗ್ಗೆ ಶ್ರೀದೇವಿಯ ಸ್ನಾನಾಭಿಷೇಕÀದೊಂದಿಗೆ ಐತಿಹಾಸಿಕ ಅಟ್ಟುಕ್ಕಾಲ್ ಪೊಂಗಲ ಪ್ರಾರಂಭವಾಗುತ್ತದೆ.
ನಾಳೆ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಟ ಉಣ್ಣಿಮುಕುಂದನ್ ಉದ್ಘಾಟಿಸಲಿದ್ದಾರೆ. ಖ್ಯಾತ ಸಾಮಾಜಿಕ ಕಾರ್ಯಕರ್ತ ಡಾ. ಪಿ.ಭಾನುಮತಿ ಅವರಿಗೆ ಅಟ್ಟುಕ್ಕಾಲ್ ಅಂಬಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಉತ್ಸವದ ಎಂಟನೇ ದಿನವಾದ ಮಾರ್ಚ್ 7 ರಂದು ಐತಿಹಾಸಿಕ ಅಟ್ಟುಕ್ಕಾಲ್ ಪೊಂಗಾಲವನ್ನು ಆಚರಿಸಲಾಗುತ್ತದೆ. ಭಕ್ತರು iÀiÁವುದೇ ನಿರ್ಬಂಧವಿಲ್ಲದೆ ಬೀದಿಗಳಲ್ಲಿ ಪೊಂಗಾಲ ಅರ್ಪಿಸುವರು. ಮಾರ್ಚ್ 8 ರಂದು ಕುರುತಿ ತರ್ಪಣದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ.
ನಾಳೆ 10.30ಕ್ಕೆ ಅಗ್ನಿಸ್ಪರ್ಶ ನಡೆಯಲಿದೆ. ಪರಮೇಶ್ವರನ್ ವಾಸುದೇವನ್ ಭಟ್ಟತಿರಿಪ್ಪಾಡ್ ಅವರು ದೀಪ ಬೆಳಗಿಸಿ ಮೇಲ್ಶಾಂತಿ ಬ್ರಹ್ಮಶ್ರೀ ಪಿ.ಕೇಶವನ್ ನಂಬೂತಿರಿಗೆ ಹಸ್ತಾಂತರಿಸುವರು. ಮೇಲ್ಶಾಂತಿ ದೇವಸ್ಥಾನದ ಮುಂಭಾಗ ಪೊಂಗಾಲ ಅಗ್ನಿಕುಂಡದಲ್ಲಿ ಅಗ್ನಿಸ್ಪರ್ಶ ನಡೆಸಿ ಚಾಲನೆ ನೀಡುವರು.
ಪೊಂಗಲ್‍ಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ವಿಸ್ತೃತ ವ್ಯವಸ್ಥೆ ಮಾಡಲಾಗಿದೆ. ಅಟ್ಟುಕಲ್ ಪೆÇಂಗಲ ದಿನದಂದು ಕೆಎಸ್‍ಆರ್‍ಟಿಸಿಯ 400 ಬಸ್‍ಗಳು ಕಾರ್ಯನಿರ್ವಹಿಸಲಿವೆ. ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಸುವ ಮೊಬೈಲ್ ಲ್ಯಾಬ್ ವಿಶೇಷ ಪರೀಕ್ಷೆಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. 3,300 ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. ಮಾರ್ಚ್ ಸಂಜೆ 6 ರಿಂದ ಮಾರ್ಚ್ 7 ಬೆಳಿಗ್ಗೆ 6ರ ವರೆಗೆ ತಿರುವನಂತಪುರಂ ಕಾರ್ಪೋರೇಷನ್ ಮತ್ತು ವೆಂಗನೂರು ಗ್ರಾಮ ಪಂಚಾಯತಿ ವೆಲ್ಲರ್ ವಾರ್ಡ್‍ನಲ್ಲಿ ಮದ್ಯ ಮಾರಾಟ ನಿಷೇಧ ಹೇರಲಾಗಿದೆ.
ಇತಿಹಾಸ ಪ್ರಸಿದ್ದ, ಮಹಿಳೆಯರ ಶಬರಿಮಲೆ ಖ್ಯಾತಿಯ ಅಟ್ಟುಕ್ಕಾಲ್ ಪೊಂಗಾಲ ಹಬ್ಬ ನಾಳೆಯಿಂದ ಆರಂಭ: ಭಕ್ತಿ ಸಾಂದ್ರತೆಯಲ್ಲಿ ಅನಂತಪುರಿ
0
ಫೆಬ್ರವರಿ 26, 2023
Tags