HEALTH TIPS

ಮುಸ್ಲಿಂ ಗಂಡು ಮಕ್ಕಳ ಮುಂಜಿ ರದ್ದು ಪಡಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ

 

               ಎರ್ನಾಕುಲಂ: ಮುಸ್ಲಿಂ ಹುಡುಗರಲ್ಲಿ ಮುಂಜಿ ಮಾಡಿಸುವ ಸಂಪ್ರದಾಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

                      ಧಾರ್ಮಿಕೇತರ ಸಂಘವೊಂದು ಈ ಮನವಿಯನ್ನು ಸಲ್ಲಿಸಿದೆ ಎಂದು The News Minuteನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

                     ಈ ಅಭ್ಯಾಸವನ್ನು ಚಿಕ್ಕ ಮಕ್ಕಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸಂಘವು ತನ್ನ ಮನವಿಯಲ್ಲಿ ಹೇಳಿದೆ.

                  ಮಕ್ಕಳ ಮೇಲೆ ಬಲವಂತವಾಗಿ ಮುಂಜಿ ಮಾಡಲಾಗುತ್ತಿದೆ. ಅದು ಅವರ ಆಯ್ಕೆಯಲ್ಲ ಮತ್ತು ಇದು ಅಂತರರಾಷ್ಟ್ರೀಯ ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಕೃತ್ಯವನ್ನು "ಕ್ರೂರ, ಅಮಾನವೀಯ ಮತ್ತು ಅನಾಗರಿಕ" ಎಂದು ಅರ್ಜಿದಾರರು ಹೇಳಿದ್ದಾರೆ.

                ಚಿಕಿತ್ಸಕವಲ್ಲದ ಮುಂಜಿಯನ್ನು ಕಾನೂನುಬಾಹಿರವೆಂದು ಘೋಷಿಸಿ, ಅದನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡಿ ಮತ್ತು ಅದರ ವಿರುದ್ಧ ಶಾಸನಬದ್ಧ ಕಾನೂನನ್ನು ತರಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries