HEALTH TIPS

ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಉಪರಾಷ್ಟ್ರಪತಿ ಧನಕರ್ ವಾಗ್ದಾಳಿ

 

              ನವದೆಹಲಿ: ಆರ್ ಬಿಐ ನಂತಹ ಪ್ರಮುಖ ಹುದ್ದೆಗಳಲ್ಲಿ ಭಾರತದಲ್ಲಿ ಅಲ್ಪಾವಧಿಗೆ ಕೆಲಸ ಮಾಡಿರುವ ಕೆಲವು  ವಿದೇಶಿ ತಜ್ಞರು, ತಮ್ಮ ದೇಶಕ್ಕೆ ಮರಳಿದ ನಂತರ ನೀಡುವ ಹೇಳಿಕೆಯನ್ನು ದೇಶದ ಜನರು ಗಂಭೀರವಾಗಿ ಪರಿಗಣಿಸಬಾರದು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.  

                   ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ 61 ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಧನಕರ್, ಸತತ ಪ್ರಯತ್ನಗಳ ನಂತರ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ.ಆದರೂ, ಕೆಲವು ಜನರು ಭಾರತದ ಆರ್ಥಿಕತೆ ಬಗ್ಗೆ ತಪ್ಪು ಕಲ್ಪನೆ ಹರಡುತ್ತಿದ್ದಾರೆ ಎಂದು ಅವರು ಹೇಳುವ ಮೂಲಕ ರಘುರಾಮ್ ರಾಜನ್ ವಿರುದ್ಧ ವಾಗ್ದಾಳಿ ನಡೆಸಿದರು.

                      ಈ ರಾಷ್ಟ್ರಕ್ಕಾಗಿ ಬೆವರು ಹರಿಸುವವರ ಸಾಧನೆಗಳನ್ನು ಕುಗ್ಗಿಸಲು, ಕಳಂಕ ತರಲು ಪ್ರಯತ್ನಿಸುವ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ಕೆಲವರು ಆರ್ ಬಿಐ ನಂತಹ ಪ್ರಮುಖ ಸಂಸ್ಥೆಯಲ್ಲಿ ಕೆಲಸ ಮಾಡಿರುತ್ತಾರೆ. ಹೊರ ದೇಶದಿಂದ ಬಂದು, ಪ್ರಮುಖ ಸ್ಥಾನ ಅಲಂಕರಿಸಿದ್ದವರು ತಮ್ಮ ಸ್ವದೇಶಕ್ಕೆ ಮರಳಿದಾಗ ಭಾರತ ಆಹಾರ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಟೀಕಿಸುತ್ತಾರೆ.

                   ಇಂತಹ ಜನರು 2020 ರಿಂದ 80 ಕೋಟಿ ಜನರಿಗೆ ಸರ್ಕಾರ ಉಚಿತ ಆಹಾರ ಧಾನ್ಯ ವಿತರಣೆ ಮಾಡಿರುವುದನ್ನು ತಿಳಿದಿಲ್ಲ, ಅಂತವರ ಹೇಳಿಕೆಯನ್ನು ವಿಶೇಷವಾಗಿ ಯುವ ಜನತೆ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries