ಕಾಸರಗೋಡು: ದೇವಸ್ಥಾನಗಳು, ಪೂಜಾ ಕೇಂದ್ರಗಳು ನಿತ್ಯ ಪೂಜೆಗಳಲ್ಲದೆ ಯಾಗ, ಯಜ್ಞಾದಿಗಳನ್ನು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರಿಯುವುದು ಭಕ್ತ ಜನರಲ್ಲಿ ಆಸ್ತಿಕ್ಯ ಭಾವವನ್ನು ತುಂಬುವುದರ ಜತೆಗೆ ಧರ್ಮ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಅವಕಾಶವಾಗುತ್ತದೆ. ಅಂತಹ ಕಾರ್ಯಗಳಲ್ಲಿ ಪಾಂಗೋಡು ಶ್ರೀ ಕ್ಷೇತ್ರವು ಹೆಜ್ಜೆ ಇಡುತ್ತಿರುವುದು ಕಾಸರಗೋಡಿನ ಭಕ್ತಾದಿಗಳಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ ಎಂದು ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟರಮಣ ಹೊಳ್ಳ ಹೇಳಿದರು.
ಅವರು ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 19 ಶುಕ್ರವಾರ ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವದಂದು ನಡೆಯಲಿರುವ ಸಾಮೂಹಿಕ ಮಹಾ ಚಂಡಿಕಾ ಯಾಗ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ ಮಾತನಾಡಿದರು.
ಪಾಂಗೋಡು ದೇವಸ್ಥಾನದ ಅಧ್ಯಕ್ಷ ಕೆ.ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಾಂಗೋಡು ಸಾಮೂಹಿಕ ಮಹಾ ಚಂಡಿಕಾ ಯಾಗ ಸಮಿತಿ ರೂಪೀಕರಿಸಲಾಯಿತು. ಕ್ಷೇತ್ರ ತಂತ್ರಿಗಳಾದ ಯು.ಪದ್ಮನಾಭ ತಂತ್ರಿ ಅರವತ್, ಡಾ.ಅನಂತ ಕಾಮತ್, ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್, ಕೃಷ್ಣಾನಂದ ಜೆಪ್ಪು, ಶಶಿಧರ ನಾಯ್ಕ್ ರಕ್ಷಾಧಿಕಾರಿಗಳಾಗಿ, ಸಂಕೀರ್ತನಾ ಸಾಮ್ರಾಟ್ ಜಯಾನಂದ ಕುಮಾರ್ ಹೊಸದುರ್ಗ, ರಾಮ ಪ್ರಸಾದ್, ಕೃಷ್ಣ ಪ್ರಸಾದ್ ಕೋಟೆಕಣಿ, ನಾಗರಾಜ್ ಕಲ್ಪತರು, ಕಮಲಾಕ್ಷ ಕಲ್ಲುಗದ್ದೆ, ಮುಖೇಶ್, ಅರಿಬೈಲು ಗೋಪಾಲ ಶೆಟ್ಟಿ ಗೌರವಾಧ್ಯಕ್ಷರಾಗಿ, ಕೆ.ಎನ್.ವೆಂಕಟರಮಣ ಹೊಳ್ಳ ಅಧ್ಯಕ್ಷರಾಗಿ, ಪ್ರದೀಪ್ ಬೇಕಲ್ ಪ್ರಧಾನ ಕಾರ್ಯದರ್ಶಿಯಾಗಿ, ಕಮಲಾಕ್ಷ ಅಣಂಗೂರು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಮೇ 19 ರಂದು ಬೆಳಗ್ಗೆ 8.30 ಕ್ಕೆ ಯಾಗ ಸಂಕಲ್ಪ ಮೊದಲ್ಗೊಂಡು 11.30 ಕ್ಕೆ ಕಲ್ಪೋಕ್ತ ಹೋಮದೊಂದಿಗೆ ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಸದ್ಗುರು ಶ್ರೀ ಗುರುದೇವಾನಂದ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಯಾಗ ಪೂರ್ಣಾಹುತಿ ನಡೆಯಲಿರುವುದು.
ಸಭೆಯಲ್ಲಿ ಕ್ಷೇತ್ರ ಪಾತ್ರಿಗಳೂ, ಕಾರ್ಯದರ್ಶಿಗಳೂ ಆದ ಪ್ರವೀಣ್ ನಾಯಕ್ ಪಾಂಗೋಡು ಸ್ವಾಗತಿಸಿದರು. ಅಧ್ಯಕ್ಷ ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಕೀರ್ತನಾ ಸಾಮ್ರಾಟ್ ಜಯಾನಂದ ಕುಮಾರ್ ಹೊಸದುರ್ಗ ಆಶಯ ಭಾಷಣ ಮಾಡಿದರು. ಕಮಲಾಕ್ಷ ಅಣಂಗೂರು, ದಿನೇಶ್ ನಾಗರಕಟ್ಟೆ, ಶ್ರೀಹರಿ ಭಟ್ ಪೆಲ್ತಾಜೆ, ಆಶಾ ರಾಧಾಕೃಷ್ಣ, ಉಷಾ ಕಿರಣ್, ಡಾ.ಮಂಜುಳಾ ಅನಿಲ್ ರಾವ್, ಸತೀಶ್ ಕೂಡ್ಲು ಶುಭಾಶಂಸನೆಗೈದರು. ಕ್ಷೇತ್ರದ ಕೋಶಾಧಿಕಾರಿ ನಾಗೇಶ್ ಪಿ.ನಾಯಕ್ ಮಂಗಳೂರು ವಂದಿಸಿದರು. ಹರೀಶ್ ಕೂಡ್ಲು, ಭಟ್ಟರಾಜ, ನವೀನ ಪಾಂಗೋಡು, ಅಭಿಷೇಕ್ ನಾಗರಕಟ್ಟೆ, ಪ್ರಜ್ವಲ್ ನಾಯಕ್, ನಿರ್ಮಲಾ ರಮೇಶ್, ಗಾಯಿತ್ರಿ ನಾಗೇಶ್, ಸುಖೇಶ್ ಮಂಗಳೂರು, ಮಂಗಳಾ ಮಂಗಳೂರು, ಸರೋಜ, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಉಪಸ್ಥಿತರಿದ್ದರು.
ಪಾಂಗೋಡು ಸಾಮೂಹಿಕ ಮಹಾ ಚಂಡಿಕಾ ಯಾಗ ಸಮಿತಿ ರಚನೆ
0
ಫೆಬ್ರವರಿ 25, 2023