ಕಾಸರಗೋಡು|: ವಿವಿಧ ಕ್ಷೇತ್ರಗಳಲ್ಲಿ ಕೆಲವೊಂದು ಸರ್ಕಾರಿ ಏಜೆನ್ಸಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಯುವ ಆವಿಷ್ಕಾರಗಳನ್ನು ಬಳಸಿಕೊಳ್ಳಲು ಈ ವರ್ಷದಿಂದ ಸರ್ಕಾರಿ ಏಜೆನ್ಸಿಗಳ ಸಂಪೂರ್ಣ ಸಹಯೋಗದೊಂದಿಗೆ ರಾಜ್ಯದಲ್ಲಿ ಯಂಗ್ ಇನ್ನೋವೇಟರ್ಸ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
ರಾಜ್ಯ ಸಚಿವ ಸಂಪುಟದ ನಿರ್ಧಾರದ ಪ್ರಕಾರ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದ್ದು, ಕಾಸರಗೋಡು ಜಿಲ್ಲಾ ಕಾರ್ಯಾಗಾರ ಕಾಸರಗೋಡು ನಗರಸಭಾ ಮಹಿಳಾ ಸಭಾಂಗಣದಲ್ಲಿ ಜರುಗಿತು. ಕಾರ್ಯಾಗಾರವನ್ನು ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ.ಮುನೀರ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರ್‍ಚಂದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿವಿಧ ಇಲಾಖೆಗಳಿಂದ ಸಮಸ್ಯೆಗಳನ್ನು ಸಂಗ್ರಹಿಸಿ ನಿರೂಪಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ಮಂಜೇಶ್ವರಂ ಗೋವಿಂದ ಪೈ ಕಾಲೇಜು ಸಹಾಯಕ ಪ್ರಾಧ್ಯಾಪಕ ಪಿ.ಸಜಿತ್ ಕುಮಾರ್, ತ್ರಿಕರಿಪುರ ಇ.ಕೆ.ನಾಯನಾರ್ ಮೆಮೋರಿಯಲ್ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಕೆ.ವಿನೋದ್, ರಾಜಪುರಂ ಸೇಂಟ್. ಪೀಯುಸ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಸಿ.ಜಿ.ಸಿರಿಯಾಕ್, ಕಾಸರಗೋಡು ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಸುಮೇಶ್ ಮತ್ತು ಕೆ ಡಿಐಎಸ್ಸಿ ಕಾರ್ಯಕ್ರಮದ ಕಾರ್ಯನಿರ್ವಾಹಕ ಜಾಮನ್ ಥಾಮಸ್ ಉಪಸ್ಥಿತರಿದ್ದರು.
ಕೇರಳದ ಐಸಿಟಿ ಅಕಾಡೆಮಿ ಪ್ರತಿನಿಧಿಸಿ ಸಂಸದ ರಾಜೇಶ್ ವಿಷಯ ಮಂಡಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ಇಲಾಖೆಗಳ ಸಮಸ್ಯೆ ನಿರೂಪಣೆಯನ್ನು ಮಂಡಿಸಿದರು. ಭಾಷಾ ಅಲ್ಪಸಂಖ್ಯಾತರನ್ನು ಒಳಗೊಂಡ ಜಿಲ್ಲೆಯಲ್ಲಿಜನರಿಗೆ ಪೂರ್ಣ ಪ್ರಮಾಣದ ಸರ್ಕಾರಿ ಸೇವೆಗಳು ಮತ್ತು ಕಲ್ಯಾಣ ಚಟುವಟಿಕೆಗಳನ್ನು ತಲುಪಿಸುವ ಪ್ರಾಯೋಗಿಕ ಸಮಸ್ಯೆಗಳು, ವಿವಿಧ ಸರ್ಕಾರಿ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿನ ಅಡಚಣೆಗಳು ಮತ್ತು ಬಿಕ್ಕಟ್ಟುಗಳು ಇತ್ಯಾದಿಗಳನ್ನು ಚರ್ಚಿಸಲಾಯಿತು.
ಯಂಗ್ ಇನ್ನೋವೇಟರ್ಸ್ ಕಾರ್ಯಕ್ರಮ ಸರ್ಕಾರಿ ಇಲಾಖೆಗಳ ಜಿಲ್ಲಾಮಟ್ಟದ ಕಾರ್ಯಾಗಾರ
0
ಫೆಬ್ರವರಿ 14, 2023
Tags