ಕಾಸರಗೋಡು: ಶತಮಾನದ ನಂತರ ಕಾಸರಗೋಡು ಮಧೂರು ಸನಿಹದ ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವ ಮಾ. 1ರಿಂದ ಆರಂಭಗೊಂಡು, . ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ಮಾ. 1ರಂದು ಬೆಳಗ್ಗೆ 10ಕ್ಕೆ ಶ್ರೀಕ್ಷೇತ್ರಕ್ಕೆ ಭಂಡಾರದ ಆಗಮನ, ಶ್ರೀ ಪಂಜುರ್ಲಿ ದೈವದ ತೊಡಙಳ್, ಕುಟ್ಟಿಚ್ಚಾತನ್ ದೈವ ಸ್ತುತಿ, ಇತ್ತಿಕಟ್ಟ್ ಚಾಮುಂಡಿ ದೈವದ ತೊಡಙಳ್ ಸಂಜೆ 6ರಿಂದ ಕುಟ್ಟಿಚ್ಚಾತನ್ ದೈವ ಕೋಲ ನಡೆಯುವುದು. 2ರಂದು ಬೆಳಗ್ಗೆ 9ಕ್ಕೆ ಇತ್ತಿಕಟ್ಟೆ ಚಾಮುಂಡಿ ದೈವ ಕೋಲ, ಅರೆಯಾಲ್ ಚಾಮುಂಡಿ ದೈವ, ಸಂಜೆ 5.30ಕ್ಕೆ ವಿಷ್ಣುಮೂರ್ತಿ ದೈವ, ಪಡ್ಡೆಯಿ ಧೂಮಾವತಿ, ರಕ್ತೇಶ್ವರೀ ದೈವಗಳ ತೊಡಙಳ್ ನಡೆಯುವುದು. ರಾತ್ರಿ 8ಕ್ಕೆ ದೈವಗಳ ಕೋಲ ನಡೆಯುವುದು.
3ರಂದು ಬೆಳಗ್ಗೆ 6ಕ್ಕೆ ರಕ್ತೇಶ್ವರಿ ದೈವ, 11ಕ್ಕೆ ಪಡ್ಡೆಯ ಧೂಮಾವತೀ ದೈವ, ಮಧ್ಯಾಹ್ನ 12ಕ್ಕೆ ಶ್ರೀ ವಿಷ್ಣುಮೂರ್ತಿ ದೈವ, 3ಕ್ಕೆ ಅಧಿಕಾರಿ ಚಾಮುಂಡಿ ದೈವದ ಕೋಲ, ಸಂಜೆ 5ಕ್ಕೆ ವಿಳಕ್ಕ್ ತಿರಿ, 5.30ಕೆಕ ಭಂಡಾರದ ನಿರ್ಗಮನ ನಡೆಯುವುದು.
ಇಂದಿನಿಂದ ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವ
0
ಫೆಬ್ರವರಿ 28, 2023