ತಿರುವನಂತಪುರಂ: ಭಾನುವಾರ ಮತ್ತು ಸೋಮವಾರ ರೈಲು ಸಂಚಾರದಲ್ಲಿ ನಿಯಂತ್ರಣ ಹೇರಲಾಗಿದೆ. ತ್ರಿಶೂರ್ ರೈಲ್ವೆ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ನಿರ್ಬಂಧ ಹೇರಲಾಗಿದೆ.
ತಿರುವನಂತಪುರಂ-ಕಣ್ಣೂರು ಜನಶತಾಬ್ದಿ, ಎರ್ನಾಕುಳಂ-ಶೋರ್ನೂರು ಎಂಇಎಂಯು, ಎರ್ನಾಕುಳಂ-ಗುರುವಾಯೂರ್ ಎಕ್ಸ್‍ಪ್ರೆಸ್ ಭಾನುವಾರ ಸಂಚಾರ ಮೊಟಕುಗೊಳಿಸಿದ್ದವು. ನಾಳೆ(27 ಫೆ.) ಕಣ್ಣೂರು- ತಿರುವನಂತಪುರಂ ಜನಶತಾಬ್ದಿ ಸಂಚಾರ ರದ್ದಾಗಿದೆ.
ಕಣ್ಣೂರು-ಎರ್ನಾಕುಳಂ ಎಕ್ಸ್‍ಪ್ರೆಸ್ ಭಾನುವಾರ ತ್ರಿಶೂರ್ ವರೆಗೆ ಮಾತ್ರ ಸಂಚರಿಸಿತು. ತಿರುವನಂತಪುರಂ-ಚೆನ್ನೈ ಮೇಲ್ ತ್ರಿಶೂರ್‍ನಿಂದ ಭಾನುವಾರ ರಾತ್ರಿ 8.43ಕ್ಕೆ ಹೊgಟಿತು. ಕನ್ಯಾಕುಮಾರಿಯಿಂದ ಹೊರಡಲಿರುವ ಬೆಂಗಳೂರು ಎಕ್ಸ್‍ಪ್ರೆಸ್ ಎರಡು ಗಂಟೆ ತಡವಾಗಿ ಹೊರಟಿತು ಎಂದು ರೈಲ್ವೆ ಇಲಾಖೆ ತಿಳಿಸಿದೆ. ರೈಲು ರದ್ದಾದ ಕಾರಣ ಕೆಎಸ್‍ಆರ್‍ಟಿಸಿ ಪ್ರಯಾಣಿಕರಿಗಾಗಿ ಹೆಚ್ಚಿನ ದೂರದ ಸೇವೆಗಳನ್ನು ಪ್ರಾರಂಭಿಸಿದೆ.
ರೈಲು ಹಳಿ ನಿರ್ವಹಣೆ: ರೈಲು ಸಂಚಾರ ನಿಯಂತ್ರಣ
0
ಫೆಬ್ರವರಿ 26, 2023
Tags