ಮಂಜೆಶ್ವರ: ತಲೇಕಳ ಸದಾಶಿವ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಮಹೋತ್ಸ ಜರುಗಿತು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ವಾಸುದೇವ ಭಟ್ ನೇತೃತ್ವದಲ್ಲಿ ಯು.ವಿ. ಲಕ್ಷ್ಮೀಶ, ರಾಮಕೃಷ್ಣ ಪ್ರಸಾದ್, ಶಿವರಾಜ ನೇತೃತ್ವದಲ್ಲಿ ಕ್ಷೇತ್ರದ ಪರಿವಾರ ದೇವರಾದ ಮಹಾಗಣಪತಿ, ರಾಮವಿಠಲ, ವನಶಾಸ್ತಾರ, ನಾಗಬ್ರಹ್ಮ, ಗುರು ವೃಂದಾವನವನ್ನೊಳಗೊಂಡ ವಿಶೇಷ ಪೂಜಾದಿ ಸೇವೆಗಳನ್ನು ನೆರವೇರಿಸಲಾಯಿತು.
ಕ್ಷೇತ್ರದ ಪ್ರಧಾನ ದೇವರಾದ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕ್ಷೀರಾಭಿμÉೀಕ, ಘೃತಾಭಿμÉೀಕ, ಮಧುವಾಭಿಷೇಕ, ಶರ್ಕರಾಭಿಷೇಕ, ಫಲಾಭಿಷೇಕದೊಂದಿಗೆ ಪಂಚಾಮೃತಾಭಿಷೇಕವನ್ನು ಮಾಡಿ ಶ್ರೀ ಗಂಧ, ಪುಷ್ಪ ನಾಳಿಕೇರ ಜಲಧಾರೆಯೊಂದಿಗೆ ಏಕಾದಶರುದ್ರಾಭಿμÉೀಕ ಸಹಿತ ವಿಶೇಷ ಸೇವೆಯನ್ನು ಹಗಲು ರಾತ್ರಿ ಸಲ್ಲಿಸಲಾಯಿತು.
ಮಹಾಶಿವರಾತ್ರಿ ಪ್ರಯುಕ್ತ ಭಜನಾ ಕಾರ್ಯ ನಡೆಯಿತು.ಇದೇ ಸಂದರ್ಭದಲ್ಲಿ ಸದಾಶಿವ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮೀಶ ವಿ. ನೇತೃತ್ವದಲ್ಲಿ ಸಭೆ ನಡೆಯಿತು. ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಶ್ರೀಕಾಂತ ಮಾಣಿಲಾತ್ತಯ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
ತಲೇಕಳದಲ್ಲಿ ಶಿವರಾತ್ರಿ ಸಂಭ್ರಮ
0
ಫೆಬ್ರವರಿ 20, 2023