ಬೆಂಗಳೂರು: ಸದಾ ಒಂದಿಲ್ಲೊಂದು ಸುದ್ದಿಗೆ ಗ್ರಾಸವಾಗುತ್ತಿರುವ ಕನ್ನಡ ನಟ ಪ್ರಕಾಶ್ ರೈ ಹಾಗೂ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ನಡುವೆ ಇದೀಗ ಸ್ಟಾರ್ ವಾರ್ ಭುಗಿಲೆದ್ದಿದೆ.
ಇತ್ತೀಚೆಗೆ ನಟ ಪ್ರಕಾಶ್ ರೈ, ಕಾರ್ಯಕ್ರಮವೊಂದರಲ್ಲಿ 'ವಿವೇಕ್ ಅಗ್ನಿಹೋತ್ರಿಗೆ ಆಸ್ಕರ್ ಅಲ್ಲ, ಭಾಸ್ಕರ್ ಕೂಡ ಸಿಗುವುದಿಲ್ಲ, ಕಾಶ್ಮೀರ್ ಫೈಲ್ಸ್ ಒಂದು ನಾನ್ಸೆನ್ಸ್ ಸಿನಿಮಾ.
ಈ ಸಿನಿಮಾವನ್ನು ಇಂಟರ್ನ್ಯಾಷನಲ್ ಜ್ಯೂರಿ ಕೂಡ ರಿಜೆಕ್ಟ್ ಮಾಡಿದ್ದಾರೆ' ಎಂದಿದ್ದರು. ಇದೇ ಸಂದರ್ಭ ಅವರು 'ಪಠಾಣ್ ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿ ಬೋಗಳೋ ನಾಯಿಗಳು ಕಡಿಯೋದಿಲ್ಲ' ಎಂದು ಕಾಲೆಳೆದಿದ್ದರು., ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ವಿವೇಕ್ ಅಗ್ನಿ ಹೋತ್ರಿ ರೈಗೆ ಟಾಂಗ್ ನೀಡಿದ್ದು 'ಕಾಶ್ಮೀರ್ ಫೈಲ್ಸ್ ಚಿಕ್ಕ ಸಿನಿಮಾ, ಚಿಕ್ಕವರ ಸಿನಿಮಾ. ಆದರೆ ಕೆಲವು ಅರ್ಬನ್ ನಕ್ಸಲರಿಗೆ ಈ ಸಿನಿಮಾ ನಿದ್ದೆಗೆಡಿಸಿದೆ. ಪ್ರಕಾಶ್ ರೈ ಪ್ರೇಕ್ಷಕರನ್ನನು ಬೋಗಳೊ ನಾಯಿಗಳು ಎಂದಿದ್ದಾರೆ. ಮಿಸ್ಟರ್ 'ಅಂಧಕಾರ್ ರಾಜ್', ಭಾಸ್ಕರ್ ಅವಾರ್ಡ್ ಹೇಗೆ ತಗೋಬೇಕು ಅಂತ ಗೊತ್ತು. ಆದರೆ ಅವರು ಯಾವಾಗಲೂ ನಿಮಗೆ ಸ್ವಂತ' ಎಂದು ಖಾರವಾಗಿ ರಿಯಾಕ್ಟ್ ಮಾಡಿದ್ದಾರೆ.
ಈ ಮಾತುಗಳ ಮೂಲಕ ಪ್ರಕಾಶ್ ರೈ ವಿರುದ್ಧ ಟ್ವೀಟ್ ಮೂಲಕ ಆಕ್ರೋಷ ಹೊರ ಹಾಕಿರುವ ವಿವೇಕ್ ಅಗ್ನಿಹೋತ್ರಿ, ಕೇರಳದ ಫೆಸ್ಟಿವಲ್ ನಲ್ಲಿ ಪ್ರಕಾಶ್ ರಾಜ್ ಮಾತನಾಡಿದ ವೀಡಿಯೋ ಶೇರ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಪಂಚದ ಶ್ರೇಷ್ಟ ಖಳನಟನಿಗೆ ಕೇವಲ 20 ಸಾವಿರ ಲೈಕ್ ಮಾತ್ರ ಎಂದು ವ್ಯಂಗವಾಡಿದ್ದಾರೆ.