ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆಯನ್ವಯ ಚೆರ್ಕಳದಲ್ಲಿ ಮೇಲ್ಸೇತುವೆ ಯೋಜನೆಯನ್ನು ಚೆರ್ಕಳ ಪೇಟೆ ವರೆಗೆ ವಿಸ್ತರಿಸಬೇಕು, ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹೆದ್ದಾರಿಯಲ್ಲಿ ಕಾಲ್ನಡೆ ಹಾದಿ ನಿರ್ಮಿಸಿಕೊಡುವಂತೆ ಆಗ್ರಹಿಸಿ ಚೆರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಮಾನವಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಧರಣಿ ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ ಅಧ್ಯಕ್ಷತೆ ವಹಿಸಿದ್ದರು ಮಾರ್ಥೋಮಾ ವಿಶೇಷ ಶಾಲೆಯ ವ್ಯವಸ್ಥಾಪಕ ಫಾದರ್ ಮ್ಯಾಥ್ಯೂ ಬೇಬಿ, ಚೆಂಗಳ ಪಂಚಾಯಿತಿ ಉಪಾಧ್ಯಕ್ಷೆ ಸಫಿಯಾ ಹಾಶಿಂ, ಮೂಸಾ ಬಿ. ಚೆರ್ಕಳ, ಅಬ್ದುಲ್ಲಕುಞÂ ಉಪಸ್ಥಿತರಿದ್ದರು. .
3000ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಶಾಲೆಯು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಾಗ ಕಾಂಕ್ರೀಟ್ ಗೋಡೆಯಿಂದ ಮಕ್ಕಳು ಶಾಲೆಗೆ ಹೋಗುವ ದಾರಿ ಸಂಪೂರ್ಣ ಮುಚ್ಚುಗಡೆಯಾಗಿ ಕಲಿಕೆಗೆ ತೊಡಕಾಗಲಿದೆ.
ಅವೈಜ್ಞಾನಿಕ ಕಾಮಗಾರಿಯಿಂದ ಈ ಸಮಸ್ಯೆ ಎದುರಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಲ್ಳಬೇಕಾಗಿದೆ. ಚೆರ್ಕಳ ಶಾಲೆಯಲ್ಲಿ ಮಾನಸಿಕ ಮತ್ತು ದೈಹಿಕವಾಗಿ ವಿಕಲಚೇತನ ವಿದ್ಯಾರ್ಥಿಗಳಿಗಾಗಿ ಆಟಿಸಂ ಕೇಂದ್ರ ಕಾರ್ಯಾಚರಿಸುತ್ತಿದೆ. ಜಿಲ್ಲೆಯ ಪ್ರಮುಖ ಸ್ಪೇಸ್ ಸೆಂಟರ್, ಅಂತರ್ಗತ ಶಿಕ್ಷಣ ಕೇಂದ್ರ, ಸಮೀಪದ ಮಾರ್ಥೋಮಾ ವಿಶೇಷ ವಿದ್ಯಾಲಯ ಮತ್ತು ಚೆರ್ಕಳ ಕುವ್ವತುಲ್ ಇಸ್ಲಾಂ ಮದರಸಾ ಕಾರ್ಯಾಚರಿಸುತ್ತಿದೆ. ಈ ಶಾಲೆಗಳ ಹಾಗೂ ವಿವಿಧ ಕೇಂದ್ರಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಬೇಡಿಕೆ ಈಡೇರುವಲ್ಲಿ ವರೆಗೆ ಪ್ರತಿಭಟನೆ ಮುಂದುವರಿಸಲು ಕ್ರಿಯಾ ಸಮಿತಿ ನಿರ್ಧರಿಸಿದೆ. ಪ್ರತಿಭಟನಾ ಸಭೆಯಲ್ಲಿ ಜನಪ್ರತಿನಿಧಿಗಳು, ಪಾಲಕರು, ಸ್ಥಳೀಯರು, ವಿದ್ಯಾರ್ಥಿಗಳು, ಚೆರ್ಕಳ ಜಮಾತ್ ಸಮಿತಿ, ಸ್ವಯಂಸೇವಾ ಸಂಸ್ಥೆಗಳು, ವಿವಿಧ ಕ್ಲಬ್‍ಗಳ ಸದಸ್ಯರು ಭಾಗವಹಿಸಿದ್ದರು.
ಚೆರ್ಕಳದಲ್ಲಿ ಮೇಲ್ಸೇತುವೆ ವಿಸ್ತರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿಯಿಂದ ಪ್ರತಿಭಟನೆ
0
ಫೆಬ್ರವರಿ 22, 2023
Tags