HEALTH TIPS

ಒಳ್ಳೆಯ ಹೆಸರೇ ನೈಜ ಆಭರಣ: ತೀರ್ಪು ನೀಡುವ ವೇಳೆ ಷೇಕ್ಸ್‌ಪಿಯರ್‌ನನ್ನು ಉಲ್ಲೇಖಿಸಿದ ಬಾಂಬೆ ಹೈಕೋರ್ಟ್‌

 

             ಮುಂಬೈ: "ಪುರಾವೆ ರಹಿತ ಕ್ರಿಮಿನಲ್‌ ಆರೋಪಗಳು ವ್ಯಕ್ತಿಯ ಘನತೆ ಮತ್ತು ಗೌರವಕ್ಕೆ ಕಳಂಕ ತರುತ್ತದೆ ಮತ್ತು ವ್ಯಕ್ತಿತ್ವ ನಷ್ಟಕ್ಕೆ ಕಾರಣವಾಗುತ್ತದೆ ಹಾಗೂ ನ್ಯಾಯಾಂಗದಿಂದ ಪರಿಹಾರ ದೊರೆತರೂ ಮತ್ತೆ ಕಳೆದುಹೋದ ಘನತೆ ಮತ್ತು ಗೌರವ ಪುನಃಸ್ಥಾಪಿಸಲು ಸಾಧ್ಯವಾಗದು," ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್‌ ಪೀಠವು ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರ ವಿರುದ್ಧ ಆಕೆಯ ನಾದಿನಿ ದಾಖಲಿಸಿದ್ದ ಎಫ್‌ಐಆರ್‌ ರದ್ದುಗೊಳಿಸುವ ವೇಲೆ ಹೇಳಿದೆ.

                ಜನವರಿ 7 ಹೊರಡಿಸಲಾದ ಈ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಆರ್‌ ಎಂ ಜೋಷಿ ಅವರ ಪೀಠವು ಷೇಕ್ಸ್‌ಪಿಯರ್‌ ಮಾತೊಂದನ್ನೂ ಉಲ್ಲೇಖಿಸಿದೆ. "ಪುರುಷ ಹಾಗೂ ಮಹಿಳೆಯ ಒಳ್ಳೆಯ ಹೆಸರು ಅವರ ಆತ್ಮಗಳ ಆಭರಣವಾಗಿದೆ. ನನ್ನ ಪರ್ಸ್‌ ಕದಿಯುವವರು ತ್ಯಾಜ್ಯವನ್ನು ಕದಿಯುತ್ತಾರೆ, ಏಕೆಂದರೆ ಅದು ಏನೇನೂ ಅಲ್ಲ, ಏಕೆಂದರೆ ಸಾವಿರಾರು ಮಂದಿ ಅದರ ಗುಲಾಮರಾಗಿದ್ದಾರೆ. ಆದರೆ ನನ್ನ ಒಳ್ಳೆಯ ಹೆಸರನ್ನು ನನ್ನಿಂದ ಕದಿಯುವವರು ಕೂಡ ಏನೂ ಪಡೆಯಲಾರರು ಮತ್ತು ನನ್ನನ್ನು ನಿಜವಾಗಿಯೂ ಬಡವನನ್ನಾಗಿಸುವುದು," ಎಂಬ ಶೇಕ್ಸ್‌ಪಿಯರ್‌ ಮಾತನ್ನು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.

                 ವ್ಯಕ್ತಿಯೊಬ್ಬನಿಗೆ ಘನತೆ ಮತ್ತು ಖ್ಯಾತಿಯ ಮೇಲಿನ ಹಕ್ಕು ಸಂವಿಧಾನದ 21 ಮತ್ತು 19(2) ವಿಧಿಯನ್ವಯ ಪ್ರದತ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

             ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ ತನ್ನ 30 ವರ್ಷದ ನಾದಿನಿ ತನ್ನ ವಿರುದ್ಧ ಜಲಗಾಂವ್‌ ಠಾಣೆಯಲ್ಲಿ ದಾಖಲಿಸಿದ್ದ ದೂರಿನ ಆಧಾರದಲ್ಲಿ ದಾಖಲಾದ ಎಫ್‌ಐಅರ್‌ ರದ್ದುಗೊಳಿಸಬೇಕೆಂದು ಕೋರಿ 40 ವರ್ಷದ ನ್ಯಾಯಾಂಗ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.

              ಅರ್ಜಿದಾರೆಯ ಸಹೋದರ (ದೂರುದಾರೆಯ ಪತಿ) ಮತ್ತು ಆಕೆಯ ಹೆತ್ತವರು (ದೂರುದಾರೆಯ ಅತ್ತೆ ಮಾವ) ವಿರುದ್ಧವೂ ಎಫ್‌ಐಆರ್‌ ದಾಖಲಾಗಿತ್ತು.

              ಅರ್ಜಿದಾರೆಗೆ ವಿವಾಹವಾಗಿದ್ದು ದೂರುದಾರೆಯ ಜೊತೆ ವಾಸವಾಗಿಲ್ಲ ಎಂಬುದನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.

                ಅರ್ಜಿದಾರೆ ಎಲ್ಲರಿಗೂ ಆಹಾರ ಆರ್ಡರ್‌ ಮಾಡಿದ್ದರೂ ದೂರುದಾರೆಗೆ ಸ್ವತಃ ಅಡುಗೆ ಮಾಡಿ ತಿನ್ನುವಂತೆ ಹೇಳಿದ್ದರು ಹಾಗೂ ತನ್ನ ಹೆತ್ತವರ ವಿರುದ್ಧ ದನಿ ಎತ್ತಬಾರದು ಮತ್ತು ತನ್ನನ್ನು ತಿದ್ದಿಕೊಳ್ಳಬೇಕು ಎಂದು ತನ್ನ ನಾದಿನಿಗೆ ಹೇಳಿದ್ದರು ಎಂಬ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

            ಈ ಆರೋಪಗಳನ್ನು ಯಾವುದೇ ರೀತಿ ನೋಡಿದರೂ ಶಿಕ್ಷಾರ್ಹ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries