ಕಾಸರಗೋಡು: ಮಹಿಳಾ ಸಮಾನತೆಗಾಗಿ ಸಾಂಸ್ಕೃತಿಕ ಮುನ್ನಡೆ ಎಂಬ ಸಂದೇಶದೊಂದಿಗೆ ಸಂಸ್ಕೃತಿ ಇಲಾಖೆ, ಕೇರಳ ಭಾಷಾ ಸಂಸ್ಥೆ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ ಜಂಟಿಯಾಗಿ ಆಯೋಜಿಸಿರುವ 'ಸಮಂ ಸಂಸ್ಕತಿಕೋತ್ಸವ' ಬೇಡಡ್ಕ ಗ್ರಾಮ ಪಂಚಾಯತ್‍ನ ಮುನ್ನಾಡ್ ಪೀಪಲ್ಸ್ ಕಾಲೇಜು ವಠಾರದ ಇಎಂಎಸ್ ಅಕ್ಷರ ಗ್ರಾಮದಲ್ಲಿ ಆರಂಭಗೊಂಡಿತು. ಗಝಲ್, ನಾಟಕ, ಚಿತ್ರಕಲಾವಿದರ ಸಂಗಮ, ಏಕಪಾತ್ರ ಅಭಿನಯ, "ಪಾಟ್ಟುಂ ಚುಟ್ಟುಂ" ಜಾನಪದ ಕಲಾ ಸಂಗಮ, ಗಾನ ಮೇಳ ಹಾಗೂ ಮೆಗಾ ಶೋ ಕಾರ್ಯಕ್ರಮ ನಡೆಯಲಿದೆ. ಕೇರಳದ ಪ್ರಮುಖ ಸಾಂಸ್ಕೃತಿಕ ಪ್ರತಿಭೆಗಳು ಭಾಗವಹಿಸುವ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳ ಮಹಿಳೆಯರನ್ನು ಸಮಂ ಪ್ರಶಸ್ತಿ ನೀಡಿ ಗೌರವಾರ್ಪಣೆ, ಕವನ ವಾಚನ ಸ್ಪರ್ಧೆ, ಶೈಕ್ಷಣಿಕ ವಿಚಾರ ಸಂಕಿರಣ ಮುಂತಾದವುಗಳು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮುನ್ನಾಡ್ ಪೆÇಲೀಸ್ ಠಾಣೆ ಆವರಣದಿಂದ ಸಿಂಗಾರಿ ಮೇಳ, ಒಳಗೊಂಡ ಸಾಂಸ್ಕೃತಿಕ ಮೆರವಣಿಗೆ, ಉದ್ಘಾಟನಾ ಸಮಾರಂಭ ಹಾಗೂ ಸಮಂ ವನಿತಾ ಪುರಸ್ಕಾರ ನಡೆಯಿತು. ಡಾ.ಸುಜಾ ಸೂಸನ್ ಜಾರ್ಜ್, ಕೇರಳ ಭಾಷಾ ಸಂಸ್ಥೆಯ ನಿರ್ದೇಶಕಿ ಡಾ.ಎಂ. ಸತ್ಯನ್, ಸಹಾಯಕ ನಿರ್ದೇಶಕ ಜಯಕೃಷ್ಣನ್, ಜಿಲ್ಲಾ ಪಂಚಾಯಿತಿ ಜಯಕೃಷ್ಣನ್, ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರ್, ಬೇಡಡ್ಕ ಗ್ರಾ.ಪಂ.ಅಧ್ಯಕ್ಷೆ ಎಂ.ಧನ್ಯ , ಸಂಘಟನಾ ಸಮಿತಿ ಉಪಾಧ್ಯಕ್ಷ ಎ.ಮಾಧವನ್, ಸಂಸ್ಥಾಪಕ ವಕೀಲ ಸಿ.ರಾಮಚಂದ್ರನ್ ಪದ್ಮಾವತಿ ಎಂ.ಅನಂತನ್ ಪ್ರಿಯಾ ವರ್ಗೀಸ್, ತ್ರಿಸ್ತರ ಪಂಚಾಯಿತಿ ಜನಪ್ರತಿನಿಧಿಗಳು, ಕುಟುಂಬಶ್ರೀ ಸದಸ್ಯರು ಸಂಘಟನಾ ಸಮಿತಿ ಸದಸ್ಯರು ಮೆರವಣಿಗೆಗೆ ನೇತೃತ್ವ ನೀಡಿದರು.
ಕುತ್ತಿಕೋಲ್ ದುಡಿ ತಾಳ ಜಾನಪದ ಕಲಾ ಸಂಘದಿಂದ ಮಂಗಳಂಕಳಿ, ಪುಳಿಕ್ಕುನ್ನ್ ಮರುವಮ್ಮ ಕಲಾಸಮಿತಿಯಿಂದ ಎರ್ದುಂಕಳಿ, ನಂದನಂ ಪೆರ್ಲಡ್ಕದವರಿಂದ ಕೋಲ್ಕಳಿ, ಬೇಡಗಂ ವಿನ್ನರ್ಸ್ ವನಿತಾ ಸಂಘದಿಂದ ತಿರುವಾದಿರ, ಕನ್ನಂಗೈ ಯುವಶಕ್ತಿ ವನಿತಾ ಸಂಘದಿಂದ ಅಲಮಿಕಲಿ ಮುಂತಾದ ಜಾನಪದ ಕಲೆಗಳು ಪ್ರದರ್ಶನಗೊಂಡಿತು. 26ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಮಹಿಳಾ ಸಮಾನತೆಗಾಗಿ ಸಾಂಸ್ಕೃತಿಕ ಮುನ್ನಡೆ-'ಸಮಂ ಸಾಂಸ್ಕøತಿಕೋತ್ಸವ'ಕ್ಕೆ ಚಾಲನೆ
0
ಫೆಬ್ರವರಿ 25, 2023