ತಿರುವನಂತಪುರ: ಕೇರಳ ವಾಸಕ್ಕೆ ಯೋಗ್ಯವಲ್ಲ ಎಂಬ ಅಪಪ್ರಚಾರ ನಡೆಯುತ್ತಿದ್ದು, ಯುವಕರು ಇಲ್ಲಿಂದ ಇತರೆಡೆಗಳಿಗೆ ತೆರಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿರುವರು.
ಕೇರಳ ಕೈಗಾರಿಕೆಗೆ ಅನುಕೂಲಕರವಾಗಿಲ್ಲ ಎಂಬ ಅಪಪ್ರಚಾರವೂ ನಡೆಯುತ್ತಿದೆ. ರಾಜ್ಯ ಹಲವು ಕ್ಷೇತ್ರಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದು, ಕೇರಳದ ಸಾಧನೆಗಳನ್ನು ಎಲ್ಲೆಡೆ ಬಿತ್ತರಿಸುವ ಮೂಲಕ ನಕಲಿ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು ಎಂದರು.
ವೃತ್ತಿಪರ ಕೋರ್ಸ್‍ಗಳನ್ನು ಮುಂದುವರಿಸಲು ವಿದ್ಯಾರ್ಥಿಗಳು ಕೇರಳವನ್ನು ತೊರೆಯುವ ಪ್ರವೃತ್ತಿ ಮುಂದುವರೆದಿದೆ. ಇದಕ್ಕೆ ಕಾರಣ ಅಲ್ಲಿ ಓದುವುದμÉ್ಟೀ ಅಲ್ಲ ಉದ್ಯೋಗ, ಕೌಶಲವನ್ನೂ ಗಳಿಸಬಹುದು ಎಂಬ ಆಶಯ ಅವರದು. ಇಲ್ಲೂ ಆ ಪರಿಸ್ಥಿತಿಯನ್ನು ಸಿದ್ಧಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಕೇರಳ ವ್ಯಾಪಾರ ಸ್ನೇಹಿ ಅಲ್ಲ ಎಂಬ ಅಪಪ್ರಚಾರವೂ ನಡೆಯುತ್ತಿದೆ. ಕೇರಳ ವಾಸಕ್ಕೆ ಯೋಗ್ಯವಲ್ಲ, ಯುವಕರು ಇಲ್ಲಿಂದ ತೆರಳಬೇಕು ಎಂಬ ಅಭಿಯಾನ ನಡೆಯುತ್ತಿದೆ. ಇದರಿಂದ ಸರಕಾರಕ್ಕೆ ನಷ್ಟವಿಲ್ಲ. ಈ ಸುಳ್ಳು ಪ್ರಚಾರವನ್ನು ಯುವಕರು ಗುರುತಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಕೇರಳ ವಾಸಕ್ಕೆ ಯೋಗ್ಯವಲ್ಲದ ನಾಡು, ಯುವಕರು ಇಲ್ಲಿಂದ ಹೊರ ನಡೆಯುತ್ತಿದ್ದಾರೆ ಎಂದು ಸುಳ್ಳು ಪ್ರಚಾರ: ಮುಖ್ಯಮಂತ್ರಿ
0
ಫೆಬ್ರವರಿ 12, 2023