ಕಾಸರಗೋಡು: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾದ ಸೆಂಟ್ರಲ್ ವೇರ್ ಹೌಸಿಂಗ್ ಕಾಪೆರ್Çರೇಷನ್ ಕಾಸರಗೋಡು ಜಿಲ್ಲೆಯ ಕೊಳತ್ತೂರಿನಲ್ಲಿ ಗೋದಾಮಿನ ಕಾಮಗಾರಿಯನ್ನು ಆರಂಭಿಸಲಾಯಿತು.
ಕೊಳತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಪ-ಜಾತಿ-ಪ.ವರ್ಗ, ಹಿಂದುಳಿದ ವರ್ಗ ಅಭಿವೃದ್ಧಿ ಖಾತೆ, ದೇವಸ್ವಂ ಖಾತೆ ಸಚಿವ ಕೆ.ರಾಧಾಕೃಷ್ಣನ್ ಉದ್ಘಾಟಿಸಿದರು. ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಧನ್ಯ, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಮಾಧವ, ವಾರ್ಡ್ ಸದಸ್ಯರಾದ ಇ.ಎಂ.ಗೋಪಾಲನ್, ಬಿ.ಎಲ್.ನೂರ್ಜಹಾನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ಅನಂತನ್, ಬಾಲಕೃಷ್ಣನ್ ಕೊಲ್ಲಂಪಾನ, ಉದಯನ್ ಚೆಂಬಕಾಡ್ ಉಪಸ್ಥಿತರಿದ್ದರು. ನಿಗಮವು ತನ್ನ ಉತ್ಪನ್ನಗಳಿಗೆ ಶೇಖರಣಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗುತ್ತಿಗೆ ಪಡೆದಿರುವ ಏಳು ಎಕರೆ ಜಾಗದಲ್ಲಿ ಗೋದಾಮು ನಿರ್ಮಿಸಲಾಗುತ್ತಿದೆ. ಕೇಂದ್ರೀಯ ಉಗ್ರಾಣ ನಿಗಮದ ನಿರ್ದೇಶಕ ಕೆ.ವಿ.ಪ್ರದೀಪಕುಮಾರ್ ಸ್ವಾಗತಿಸಿ, ಕೊಚ್ಚಿಯ ಪ್ರಾದೇಶಿಕ ವ್ಯವಸ್ಥಾಪಕ ಅನೀಶ್ ಬಿ.ಆರ್ ಧನ್ಯವಾದವಿತ್ತರು.
ಕೊಳತ್ತೂರು ಉಗ್ರಾಣ ಕಾಮಗಾರಿಗೆ ಸಚಿವ ಕೆ. ರಾಧಾಕೃಷ್ಣನ್ ಚಾಲನೆ
0
ಫೆಬ್ರವರಿ 24, 2023
Tags