ಕಾಸರಗೋಡು: ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್‍ಎನ್‍ಡಿಪಿ) ಯೂನಿಯನ್ ಪೂರ್ವಭಾವಿ ಸಭೆ ಕಾಸರಗೋಡು ಕಚೇರಿಯಲ್ಲಿ ಜರುಗಿತು. ಯೂನಿಯನ್ ಕಾರ್ಯದರ್ಶಿ ಗಣೇಶ್ ಪಾರಕಟ್ಟೆ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ನಾರಾಯಣ ಮಂಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎ. ಟಿ. ವಿಜಯನ್, ಯೋಗಂ ಸಮಚಾಲಕ ವಕೀಲ ಪಿ. ಕೆ. ವಿಜಯನ್, ಮೋಹನನ್ ಮೀಪುಗುರಿ, ರಾಜೇಶ್ ಚೆರ್ಕಳ, ಜಯಂತ ಪಚ್ಚಂಬಳ, ವಿಜಯನ್ ಮಾಣಿಪಾಡಿ, ಮೋಹಿನಿ ಹರೀಶ್ ಕೆ, ಪವಿತ್ರಾ ಮತ್ತು ರಂಜಿನಿ ಉಪಸ್ಥಿತರಿದ್ದರು.
ಮಾರ್ಚ್ 12 ರಂದು ನೀಲೇಶ್ವರಂನಲ್ಲಿ ನಡೆಯಲಿರುವ ಜಿಲ್ಲಾ ಅಧ್ಯಯನ ಶಿಬಿರದ ಪೂರ್ವಭಾವಿಯಾಗಿ ಯೂನಿಯನ್ ಸಭೆ ಆಯೋಜಿಸಲಾಗಿತ್ತು.
ಈ ಸಂದರ್ಭ ಕಾಸರಗೋಡು ಪಳ್ಳಂನಲ್ಲಿರುವ ಸಾರ್ವಜನಿಕ ಸ್ಮಶಾನವನ್ನು ನವೀಕರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿತು.
ಜಿಲ್ಲಾ ಅಧ್ಯಯನ ಶಿಬಿರ-ಎಸ್‍ಎನ್‍ಡಿಪಿಯಿಂದ ಪೂರ್ವಭಾವಿ ಸಭೆ
0
ಫೆಬ್ರವರಿ 19, 2023