ತಿರುವನಂತಪುರಂ:ಶಿಕ್ಷಣಕ್ಕಾಗಿ ಕಾಸರಗೋಡಿನಿಂದ ಮಂಗಳೂರು ತೆರಳುವ ವಿದ್ಯಾರ್ಥಿಗಳಿಗೆ ಕೇರಳ ರಸ್ತೆ ಸಾರಿಗೆ ನಿಗಮ ಬಸ್‍ಗಳಲ್ಲಿ ರಿಯಾಯಿತಿ ದರ ಕಲ್ಪಿಸುವ ಬಗ್ಗೆ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಲಿದೆ. ಮುಂದಿನ ಅಧ್ಯಯನ ವರ್ಷದಿಂದಲೇ ಜಾರಿಗೆ ಬರುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ, ವಕೀಲ ಆಂಟನಿ ರಾಜು ತಿಳಿಸಿದ್ದಾರೆ.
ಅವರು ಗಡಿನಾಡ ಸಾಂಸ್ಕøತಿಕ ಅಕಾಡಮಿ ಕಾಸರಗೋಡು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾರತ್ ಭವನ ತಿರುವನಂತಪುರ-ಕೇರಳ ಸರ್ಕಾರ ಸಹಯೋಗದೊಂದಿಗೆತಿರುವನಂತಪುರ ತೈಕಾಡ್ ಪೌಂಡ್ ಕಾಲನಿಯ ಭಾರತ್ ಭವನ ಸಭಾಂಗಣದಲ್ಲಿ ನಡೆದ 'ಅನಂತಪುರಿ ಗಡಿನಾಡ ಸಾಂಸ್ಕøತಿಕ ಉತ್ಸವ-2023' ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂವಹನಕ್ಕೆ ಭಾಷೆ ಮುಖ್ಯ. ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ಕನ್ನಡದ ಸಾಹಿತ್ಯಕ್ಕೆ ಭಾಷೆಯ ಕೊಡುಗೆಯೂ ಅಪಾರವಾದುದು. ಕಾಸರಗೋಡಿನ ಕನ್ನಡ ಭಾಷಿಗರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದು, ಇಲ್ಲಿನ ವಿದ್ಯರ್ತಿಗಳು ಅನುಭವಿಸುತ್ತಿರುವ ಪ್ರಯಾಣ ಸಮಸ್ಯೆಗೂ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಗಡಿನಾಡ ಸಾಂಸ್ಕøತಿಕ ಅಕಾಡಮಿ ಸಂಸ್ಥಾಪಕ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಸಕರಾದ ಎನ್.ಎ ನೆಲ್ಲಿಕುನ್ನು ಹಾಗೂ ಎ.ಕೆ.ಎಂ ಅಶ್ರಫ್ ಅವರು ಕಾಸರಗೋಡಿನ ಕನ್ನಡಿಗರ ಯಾವುದೇ ಸಮಸ್ಯೆಗಳಿಗೂ ವಿಧಾನಸಭೆಯ ಒಳಗೆ ಹಾಗೂ ಹೊರಗೆ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು. ತಿರೂರ್ ಶಾಸಕ ಕುರುಕ್ಕೋಳಿ ಮಹಮ್ಮದ್, ತಿರುವನಂತಪುರ ಜಿಲ್ಲಾ ಗ್ರಾಹಕರ ತರ್ಕ ಪರಿಹಾರ ಆಯೋಗ ಅಧ್ಯಕ್ಷ ವಕೀಲ ಪಿ.ವಿ ಜಯರಾಜ್, ಕರ್ನಾಟಕ ಜಾನಪದ ಪರಿಷತ್ ದ.ಕ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲಬೈಲ್, ತಿರುವನಂತಪುರ ಜಿಲ್ಲಾ ಕನ್ನಡ ಸಂಘ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಕೊಚ್ಚಿ ಕನ್ನಡ ಸಂಘ ಅಧ್ಯಕ್ಷ ಶ್ರೀನಿವಾಸ ರಾವ್, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಅನಂತಪುರಿ ಗಡಿನಾಡ ಸಾಂಸ್ಕøತಿಕ ಉತ್ಸವ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯಕಟ್ಟೆ, ಜೆಡ್.ಎ ಕಯ್ಯಾರ್, ಅಬೂಬಕ್ಕರ್ ರೋಯಲ್ ಬೊಳ್ಳಾರ್, ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ನಿವೃತ್ತ ಪ್ರಾಧ್ಯಾಪಕ ಡಾ. ರಾಮ, ಡಾ. ಆರತಿಕೃಷ್ಣ, ಟಿ.ಕೆ ಅಹಮ್ಮದ್ ಮಾಸ್ಟರ್, ಎಸ್. ಜಗದೀಶ್ ಅಂಚನ್ ಸೂಟರ್‍ಪೇಟೆ, ಸಿನಿಮಾ ನಟ ಮಹಮ್ಮದ್ ಬಿನು ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ನಗುಮುಗಂ ವಂದಿಸಿದರು.
ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿಯಲ್ಲಿ ರಿಯಾಯಿತಿ ಪಾಸ್ ಪರಿಗಣನೆ-ಸಚಿವ ಆಂಟನಿರಾಜು ಭರವಸೆ
0
ಫೆಬ್ರವರಿ 10, 2023
Tags