ಗೋಪೇಶ್ವರ್: ಭೂಕುಸಿತದಿಂದ ನಲುಗಿರುವ ಉತ್ತರಾಖಂಡದ ಜೋಶಿಮಠದಲ್ಲಿ ಆಹಾರಧಾನ್ಯಗಳನ್ನು ಸಂಗ್ರಹಿಸಿದ್ದ ಗೋದಾಮೊಂದರಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದ್ದು, ಅದನ್ನು ಖಾಲಿ ಮಾಡಲು ಮತ್ತು ಗ್ರಾಹಕರಿಗೆ ಮುಂಚಿತವಾಗಿ ಆಹಾರಧಾನ್ಯಗಳನ್ನು ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಗುಲಾಬ್‌ಕೋಟಿ ಎಂಬಲ್ಲಿರುವ ಇನ್ನೊಂದು ಗೋದಾಮನ್ನು ಪರ್ಯಾಯವಾಗಿ ಬಳಸಲು ಚಿಂತನೆ ನಡೆಸಲಾಗಿದೆ ಎಂದೂ ಹೇಳಿವೆ.
ಜೋಶಿಮಠದ ಸಿಂಗ್‌ಧಾರ್‌ನ ವಾರ್ಡ್‌ನಲ್ಲಿರುವ ಗೋದಾಮಿನಲ್ಲಿ ಜನವರಿ 2ರಂದೇ ಬಿರುಕು ಕಾಣಿಸಿಕೊಂಡಿತ್ತು. ಈಗ ಗೋದಾಮಿನ ಕೆಲವು ಕೊಠಡಿಗಳು ಕುಸಿದಿರುವುದರಿಂದ ಅದನ್ನು ಬಳಸಲು ಕಷ್ಟವಾಗುತ್ತಿದೆ. ಈ ಕಾರಣಕ್ಕೆ ಗೋದಾಮನ್ನು ಖಾಲಿ ಮಾಡಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ವಿತರಣಾಧಿಕಾರಿ ಜಸ್ವಂತ್ ಸಿಂಗ್ ಕಂದಾರಿ ತಿಳಿಸಿದ್ದಾರೆ.