ಕಾಸರಗೋಡು: ಕೇರಳದ ಕರಾವಳಿಯಲ್ಲಿ ಫೆ. 15ರ ರಾತ್ರಿಯಿಂದ ಭಾರಿ ಸಮುದ್ರಕೊರೆತಕ್ಕೆ ಸಾಧ್ಯತೆಯಿದ್ದು, ಕರಾವಳಿ ಜನತೆ ಜಾಗ್ರತೆ ಪಾಲಿಸುವಂತೆ ಕೇಂದ್ರ ಸಮುದ್ರ ಸಥಿತಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ(ಐಎನ್‍ಸಿಓಐಎಸ್)ಸೂಚನೆ ನೀಡಿದೆ. ಮೀನುಗಾರರು ಹಾಗೂ ಕರಾವಳಿಯಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ ಬೃಹತ್ ಅಲೆಗಳೊಂದಿಗೆ ಸಮುದ್ರ ಕೊರೆತ ಸಾಧ್ಯತೆಯಿದ್ದು, ಅಪಾಯಕಾರಿ ಪ್ರದೇಶದ ಜನತೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆಯೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ದೇಶ ನೀಡಿದೆ. ಒಂದೆರಡು ದಿವಸಗಳ ಕಾಲ ಸಮುದ್ರದಲ್ಲಿ ಬೃಹತ್ ಅಲೆಗಳು ಕಂಡುಬರುವ ಸಾಧ್ಯತೆಯಿದೆ ಎಂದೂ ತಿಳಿಸಲಾಗಿದೆ.
ಸಮುದ್ರದಲ್ಲಿ ಬೃಹತ್ ಅಲೆಗಳಿಗೆ ಸಾಧ್ಯತೆ-ಕಟ್ಟೆಚ್ಚರ ನಿರ್ದೇಶ
0
ಫೆಬ್ರವರಿ 16, 2023
Tags