ಕಣ್ಣೂರು: ಆಧುನಿಕ ಕೃಷಿ ಪದ್ಧತಿ ಕಲಿಯಲು ರಾಜ್ಯದಿಂದ ಇಸ್ರೇಲ್‍ಗೆ ತೆರಳಿದ್ದ ರೈತರ ಗುಂಪಿನಲ್ಲಿ ಬಿಜು ಕುರಿಯನ್ ಎಂಬ ರೈತ ನಾಪತ್ತೆಯಾಗಿದ್ದ.
ಗುಂಪು ಹಿಂದಿರುಗುವ ಮುನ್ನವೇ ಆತ ನಾಪತ್ತೆಯಾಗಿದ್ದು, ಯೋಜನೆಯಂತೆ ಬಿಜು ಕುರಿಯನ್ ಗುಂಪಿನಿಂದ ತಪ್ಪಿಸಿಕೊಂಡಿರುವನು ಎಂದು ಅವರ ಸಹ ಪ್ರಯಾಣಿಕರು ಹೇಳುತ್ತಾರೆ.
ಇಸ್ರೇಲ್‍ನಲ್ಲಿ ಒಂದು ಕ್ಲೀನಿಂಗ್ ಕೆಲಸಕ್ಕೆ ದಿನಕ್ಕೆ 15,000 ರೂ.ವೇತನವಿದೆ. ರೈತರ ಕೂಲಿ ನಮ್ಮ ದೇಶದ ದುಪ್ಪಟ್ಟು ಕೂಲಿ ಎಂದು ಬಿಜು ಜೊತೆಗಿದ್ದವರಿಗೆ ಹೇಳಿದ್ದರು. ಇದೆಲ್ಲ ಗೊತ್ತಿದ್ದೂ ಬಿಜು ತುಂಬಾ ಯೋಜನಾಬದ್ಧವಾಗಿ ಕಾಲ್ಕಿತ್ತಿರಬೇಕು ಎನ್ನುತ್ತಾರೆ ಸಹ ಪ್ರಯಾಣಿಕ ಸುಜಿತ್. ಬಿಜು ಇಸ್ರೇಲ್‍ನಲ್ಲಿ ಉಳಿಯುವ ಉದ್ದೇಶದಿಂದ ಗುಂಪನ್ನು ಸೇರಿಕೊಂಡರು ಎಂದು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಬಿಜು ಇಸ್ರೇಲ್‍ಗೆ ಹೋಗಿ ಬರುವ ವಿಮಾನ ಟಿಕೆಟ್‍ಗೆ ಪಾವತಿಸಿ ಗುಂಪನ್ನು ಸೇರಿಕೊಂಡರು. ಪ್ರಯಾಣ ಮಾಡುವಾಗ ಮತ್ತು ಭೇಟಿ ನೀಡುವಾಗ ನಿರಂತರವಾಗಿ ಮಲಯಾಳಿ ಗೆಳೆಯರೊಂದಿಗೆ ಫೆÇೀನ್ ನಲ್ಲಿ ಮಾತನಾಡುತ್ತಿದ್ದರು ಎಂದು ಜೊತೆಗಿದ್ದವರು ಹೇಳಿದ್ದಾರೆ. ಬಿಜು ಅವರು ಪಾಯಂ ಕೃಷಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು. ಒಂದೆಡೆ ಕೃಷಿ ಅಧಿಕಾರಿ ಬಿಜು ಎಂಬ ರೈತನ ಜಮೀನನ್ನು ಪರಿಶೀಲಿಸಿ ಖಚಿತ ಪಡಿಸಿದ್ದರು. ಇದಾದ ಬಳಿಕ ಅವರನ್ನು ಆಯ್ಕೆ ಮಾಡಲಾಯಿತು. ಬಿಜು ಅವರ ಅರ್ಹತೆಯನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ ಎಂದೂ ಕೃಷಿ ಅಧಿಕಾರಿ ಹೇಳುತ್ತಾರೆ.
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಬಿ ಅಶೋಕ್ ನೇತೃತ್ವದಲ್ಲಿ 27 ರೈತರು ಇಸ್ರೇಲ್ ಗೆ ತೆರಳಿದ್ದರು. ಇಸ್ರೇಲ್‍ಗೆ ತೆರಳಿದ್ದ 26 ರೈತರ ತಂಡ ಕೊಚ್ಚಿಗೆ ಮರಳಿತ್ತು. ಗುಂಪಿನಲ್ಲಿದ್ದ ಕಣ್ಣೂರು ಮೂಲದ ಬಿಜು ಕುರ್ಯಾನ್ ಗುರುವಾರ ಆಹಾರ ಸೇವಿಸಿ ನಾಪತ್ತೆಯಾಗಿದ್ದು, ತಲೆನೋವಿಗೆ ಔಷಧ ಖರೀದಿಸುವುದಾಗಿ ಹೇಳಿ ಬಿಜು ತೆರಳಿದ್ದಾಗಿ ತಿಳಿಸಿದ್ದಾರೆ. ಇಸ್ರೇಲಿ ಪೆÇಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಗುಂಪಿನ ಸದಸ್ಯರು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಸುದ್ದಿ ತಿಳಿದು ಮನೆಗೆ ಕರೆ ಮಾಡಿ ಅವರು ಸುರಕ್ಷಿತವಾಗಿದ್ದು, ಹುಡುಕುವ ಅಗತ್ಯವಿಲ್ಲ ಎಂದು ತಿಳಿಸಿರುವರೆಂದು ಹೇಳಲಾಗಿದೆ. ಬಿಜು ಕುರಿಯನ್ ಇಲ್ಲದೆ ರೈತ ತಂಡ ಮರಳಿತು. ಈತನ ವೀಸಾ ಮೇ 8ರ ವರೆಗೆ ಚಾಲ್ತಿಯಲ್ಲಿದ್ದರೂ ಗ್ರೂಪ್‍ನಿಂದ ತಪ್ಪಿಸಿಕೊಂಡಿರುವ ಆತನ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ. ಗುಂಪಿನ ನೇತೃತ್ವ ವಹಿಸಿದ್ದ ಬಿ ಅಶೋಕ್ ಅವರು ಇಸ್ರೇಲ್ ಪೆÇಲೀಸರು ಮತ್ತು ರಾಯಭಾರ ಕಚೇರಿಗೆ ದೂರು ನೀಡಿದ್ದಾರೆ. ಬಿಜು ಅವರಿಗೆ ಯಾವುದೇ ಅವಘಡ ಸಂಭವಿಸಿಲ್ಲ, ರಾಯಭಾರಿ ಕಚೇರಿ ಹಾಗೂ ಪೆÇಲೀಸರಿಗೆ ದೂರು ನೀಡಲಾಗಿದೆ ಎಂದು ಕೃಷಿ ಸಚಿವ ಪಿ. ಪ್ರಸಾದ್ ಹೇಳಿದರು.
ಆಧುನಿಕ ಕೃಷಿ ವಿಧಾನಗಳ ಅಧ್ಯಯನ; ಕೇರಳದಿಂದ ಇಸ್ರೇಲ್‍ಗೆ ತೆರಳಿದ್ದ ರೈತ ಬಿಜು ನಾಪತ್ತೆಯಾದುದರ ಹಿಂದಿದೆ ಮಸಲತ್ತು
0
ಫೆಬ್ರವರಿ 21, 2023