ಪೆರ್ಲ: ಸಿಒಡಿಪಿ ಸಂಸ್ಥೆಯ ನೇತೃತ್ವದಲ್ಲಿ ಸೌಹಾರ್ದ ಮಹಾ ಸಂಘದ ವತಿಯಿಂದ ಶೇಣಿ ಶಾಲಾ ಪರಿಸರದಲ್ಲಿ ಶ್ರೀಶಾರದಾಂಬಾ ಹೈಯರ್ ಸೆಕೆಂಡರಿ ಶಾಲಾ ಎನ್ನೆಸ್ಸಸ್, ಸ್ಕೌಟ್- ಗೈಡ್ಸ್ ,ಎಣ್ಮಕಜೆ ಗ್ರಾ.ಪಂ. ಕುಟುಂಬಶ್ರೀ ಹಾಗೂ ಹರಿತಾ ಕರ್ಮ ಸೇನೆಯ ಸಹಕಾರದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ "ಪರಿಸರ ಸ್ಛಚ್ಛತೆ ಎಂಬುದು ಪ್ರತಿಯೊಬ್ಬರ ಪ್ರಥಮ ಕರ್ತವ್ಯವಾಗಬೇಕಿದ್ದು ಇಂತಹ ಅಭಿಯಾನದಿಂದ ಜನ ಜಾಗೃತಿ ಮೂಡಬೇಕು. ಎಲ್ಲೆಂದರಲ್ಲಿ ಕಸ ಕಡ್ಡಿಗಳನ್ನು ಪ್ಲಾಸ್ಟಿಕ್ ಎಸೆಯುವವರು ಪರಿಸರ ಮಾಲಿನ್ಯದ ಮೂಲ ಕಾರಣಕರ್ತರು. ಸ್ವಚ್ಛ ಪರಿಸರವನ್ನು ಮುಂದಿನ ಜನಾಂಗಕ್ಕೆ ದಾಟಿಸಬೇಕಾದ ಹೊಣೆಗಾರಿಕೆ ನಮ್ಮದಾಗಿರುವಾಗ ಪ್ರತಿಯೊಬ್ಬರು ಇದರ ಬಗ್ಗೆ ಜಾಗರೂಕರಾಗಿರಬೇಕು " ಎಂದರು.
ಸಿಒಡಿಪಿ ಸಂಯೋಜಕ ಪೀಟರ್ ಪೌಲ್ ಡಿ.ಸೋಜ,ಶೇಣಿ ಶಾಲಾ ಶಿಕ್ಷಕರಾದ ರವಿ ಪ್ರಕಾಶ್, ಸವಿತಾ,ವರದಾ,ಸೌಹಾರ್ದ ಮಹಾ ಸಂಘದ ಕಾರ್ಯದರ್ಶಿ ಜಯ, ಹರಿತಾ ಕರ್ಮ ಸೇನೆಯ ಅಗ್ನೇಸ್ ಡಿ.ಸೋಜ, ಮಾಲತಿ ಈಶ್ವರ್ ನಾಯ್ಕ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಎನ್ನೆಸ್ಸಸ್ಸ್ ಯೋಜನಾಧಿಕಾರಿ,ಉಪನ್ಯಾಸಕ ಸಂತೋμï ಕುಮಾರ್ ಕ್ರಾಸ್ತಾ ಸ್ವಾಗತಿಸಿ ಸಿಒಡಿಪಿ ಕಾರ್ಯಕರ್ತೆ ಜೆಸಿಂತಾ ಕ್ರಾಸ್ತಾ ವಂದಿಸಿದರು.