ಮಂಜೇಶ್ವರ: ಮಂಜೇಶ್ವರ ತಾಲೂಕಿನಲ್ಲಿ ಕೃಷಿ ಉದ್ದೇಶಕ್ಕಾಗಿ ನೀಡುವ ಸೀಮೆಎಣ್ಣೆ ಪರವಾನಗಿಯನ್ನು ಮಾರ್ಚ್ 3 ರಂದು ಬೆಳಗ್ಗೆ 11 ರಿಂದ 1.30 ರವರೆಗೆ ವರ್ಕಾಡಿ, ಪೈವಳಿಕೆ ಮತ್ತು ಮೀಂಜ ಪಂಚಾಯತ್‍ಗಳಿಗೆ ಸೇರಿದವರಿಗೆ ಮತ್ತು ಮಾರ್ಚ್ 4 ರಂದು ಬೆಳಗ್ಗೆ 11 ರಿಂದ 1.30 ರ ವರೆಗೆ ಕುಂಬಳೆ, ಪುತ್ತಿಗೆ ಮತ್ತು ಎಣ್ಮಕಜೆ ಪಂಚಾಯತ್‍ಗಳಿಗೆ ಸೇರಿದವರಿಗೆ ಆಯಾ ಕೃಷಿ ಭವನಗಳ ಮೂಲಕ ವಿತರಿಸಲಾಗುವುದು.
ಮಂಗಲ್ಪಾಡಿ, ಮಂಜೇಶ್ವರ ಪಂಚಾಯತ್‍ಗಳಿಗೆ ಸೇರಿದವರಿಗೆ ಮಾರ್ಚ್ 04 ರಂದು ಮಂಜೇಶ್ವರ ತಾಲೂಕು ಸರಬರಾಜು ಕಛೇರಿಯಲ್ಲಿ ಬೆಳಗ್ಗೆ 11 ರಿಂದ 1.30 ರವರೆಗೆ ವಿತರಿಸಲಾಗುವುದು. ಪರವಾನಗಿ ಪಡೆಯಲು ಬರುವವರು ಪಡಿತರ ಚೀಟಿ ಮತ್ತು ಪರವಾನಗಿ ಶುಲ್ಕ 52.50 ರೂಪಾಯಿಗಳನ್ನು ಪಾವತಿಸಬೇಕು ಎಂದು ಸೂಚಿಸಲಾಗಿದ್ದು ಮಾಹಿತಿಗೆ ದೂರವಾಣಿ -04998 240089 ಸಂಪರ್ಕಿಸಬಹುದು.
ಕೃಷಿ ಅಗತ್ಯಗಳಿಗಾಗಿರುವ ಸೀಮೆಎಣ್ಣೆ ಪರವಾನಗಿ ವಿತರಣೆ
0
ಫೆಬ್ರವರಿ 28, 2023