ಕಾಸರಗೋಡು: ಕಿರು ಕೈಗಾರಿಆ ವಲಯವನ್ನು ಕಡೆಗಣಿಸಿರುವ ಕೇಂದ್ರ ಹಾಗೂ ರಾಜ್ಯ ಬಜೆಟ್ ಹಾಗೂ ಹೊಸದಾಗಿ ವಿಧಿಸಿರುವ ಇಂಧನ ಸೆಸ್ ವಿರುದ್ಧ ಕೇರಳ ವ್ಯಾಪಾರಿಗಳು ಮತ್ತು ವ್ಯಾಪಾರಿಗಳ ಸಮನ್ವಯ ಸಮಿತಿ ರಾಜ್ಯವ್ಯಾಪಿ ಮುಷ್ಕರಕ್ಕೆ ಮುಂದಾಗಿದೆ.
ಮುಷ್ಕರದ ಮೊದಲ ಹಂತವಾಗಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ(ಕೆವಿವಿಇಎಸ್) ರಾಜ್ಯ ಸಮಿತಿಯು ಸೆ.28ರಂದು ಸೆಕ್ರೆಟರಿಯೇಟ್ ಎದುರು ಪ್ರತಿಭಟನಾ ಧರಣಿ ನಡೆಸಲಿದ್ದು, ಇದರ ಪ್ರಚಾರಾರ್ಥ ಫೆ. 21ರಂದು ಜಿಲ್ಲೆಯಲ್ಲಿ ವ್ಯಾಪಾರಿಗಲ ವಾಹನ ಪ್ರಚಾರ ಜಾಥಾ ನಡೆಯಲಿದೆ ಎಂದು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.
ಹೋಟೆಲ್ ಸಿಬ್ಬಂದಿಗೆ ಆರೋಗ್ಯ ಕಾರ್ಡಿನ ಹೆಸರಿನಲ್ಲಿ ವ್ಯಪಾರಿಗಳಿಗೆ ನೀಡುವ ಕಿರುಕುಳ ನಿಲ್ಲಿಸಬೇಕು, ಬೆಲೆ ಏರಿಕೆಗೆ ಕಾರಣವಾಗುವ ಇಂಧನ ಸೆಸ್ ಹಿಂಪಡೆಯಬೇಕು, 1600 ರೂ.ನಿಂದ 1300 ರೂ.ಗೆ ಕಡಿತಗೊಂಡ ವರ್ತಕರ ಕಲ್ಯಾಣ ನಿಧಿ ಪಿಂಚಣಿ ಮರುಸ್ಥಾಪಿಸಬೇಕು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಪಟ್ಟಣಗಳಲ್ಲಿ ಅಂಡರ್‍ಪ್ಯಾಸೇಜ್ ಮತ್ತು ಮೇಲ್ಸೇತುವೆ ನಿರ್ಮಿಸಬೇಕು, ಹೊರಹಾಕಲ್ಪಟ್ಟ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು, ಜಿಎಸ್‍ಟಿ ಹೆಸರಿನಲ್ಲಿ ನಡೆಯುತ್ತಿರುವ ವರ್ತಕರ ದಬ್ಬಾಳಿಕೆಗೆ ಕಡಿವಾಣಹಾಕಬೇಕು, ಕಟ್ಟಡ ತೆರಿಗೆ, ವಿದ್ಯುತ್ ಶುಲ್ಕ, ನೀರಿನ ದರ ಹೆಚ್ಚಳವನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳೊಂದಿಗೆ ಜಿಲ್ಲಾಧ್ಯಕ್ಷ ಕೆ.ಅಹಮದ್ ಷರೀಫ್ ನೇತೃತ್ವದಲ್ಲಿ ನ.21ರಂದು ತ್ರಿಕರಿಪುರದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಪುದುಚೇರಿ ಟ್ರೇಡರ್ಸ್ ಫೆಡರೇಶನ್ ಅಧ್ಯಕ್ಷ ಕೆ.ಕೆ.ಅನಿಲಕುಮಾರ್ ಜಾಥಾ ಉದ್ಘಾಟಿಸುವರು. ವಿವಿಧ ಘಟಕಗಳಲ್ಲಿ ಸ್ವಾಗತ ಸಮಾರಂಭದ ನಂತರ 25ರಂದು ಸಂಜೆ ಕಾಸರಗೋಡಿನಲ್ಲಿ ಪ್ರಚಾರ ಜಾಥಾ ಸಮಾರೋಪಗೊಳ್ಳಲಿದೆ. ಸಂಘಟನೆ ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಜಿಲ್ಲಾ ಕಾರ್ಯದರ್ಶಿಗಳಾದ ಕುಞÂರಾಮನ್ ಆಕಾಶ್, ಟಿ.ಎ.ಅನ್ವರ್ ಸಾದತ್, ಕೆ.ದಿನೇಶ್, ಕಾಸರಗೋಡು ಘಟಕ ಅಧ್ಯಕ್ಷ ಟಿ.ಎ ಇಲ್ಯಾಸ್ ಉಪಸ್ಥಿತರಿದ್ದರು.
ಬೆಲೆಯೇರಿಕೆ, ಇಂಧನ ಸೆಸ್-ವ್ಯಾಪಾರಿಗಳಿಂದ ರಾಜ್ಯವ್ಯಾಪಿ ಪ್ರತಿಭಟನೆ: ನಾಳೆ ವಾಹನಪ್ರಚಾರ ಜಾಥಾ
0
ಫೆಬ್ರವರಿ 19, 2023
Tags