ಎರ್ನಾಕುಳಂ: ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟ ಸುಬಿ ಸುರೇಶ್ ನಿಧನರಾಗಿದ್ದಾರೆ. ಅವರು ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆಲುವಾ ರಾಜಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಬಿ ಸುರೇಶ್ ಪ್ರಸಿದ್ಧ ಚಲನಚಿತ್ರ ನಟಿ ಮತ್ತು ನಿರೂಪಕಿ. ಕಿರುತೆರೆಯ ಹಾಸ್ಯ ಕಾರ್ಯಕ್ರಮ ಸಿನಿಮಾಲಾ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ರಾಜಸೇನನ್ ನಿರ್ದೇಶನದ ಕನಕ ಸಿಂಹಾಸನಂ ಅವರ ಮೊದಲ ಚಿತ್ರ. ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟ ಸುಬಿ ಸುರೇಶ್ ನಿಧನ
0
ಫೆಬ್ರವರಿ 22, 2023