ಇರಿಂಞಲಕುಡ: ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದ ಪ್ರಣವ್ ಸಂಗಾತಿ ಶಹಾನಾ ಅವರನ್ನು ಒಂಟಿಯಾಗಿಸಿ ಇಹಲೋಕ ತ್ಯಜಿಸಿದ್ದಾರೆ.
ತ್ರಿಶೂರ್ ಕನ್ನಿಕರ ಮೂಲದ ಪ್ರಣವ್ (31) ಶುಕ್ರವಾರ ಬೆಳಗ್ಗೆ ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.
ಕಾರು ಅಪಘಾತದಿಂದಾಗಿ ವೀಲ್ ಚೇರ್‍ನಲ್ಲಿ ದಿನಗಳೆಯುತ್ತಿದ್ದ ಪ್ರಣವ್ ಅವರ ಜೀವನದಲ್ಲಿ 2020 ರಲ್ಲಿ ಶಹಾನಾ ಪ್ರವೇಶಿಸುತ್ತಾಳೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ನಂತರ ಈ ಜೋಡಿ ಪ್ರಚುರಕ್ಕೆ ಬಂದರು. ಸೋಷಿಯಲ್ ಮೀಡಿಯಾದಲ್ಲಿ ಪ್ರಣವ್ ಶಹಾನಾ ಎಂದೇ ಖ್ಯಾತರಾಗಿದ್ದರು.
ಎಂಟು ವರ್ಷಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಪ್ರಣವ್ ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿದ್ದು, ದೇಹ ಸಂಪೂರ್ಣ ನಿಷ್ಕøಯವಾಗಿತ್ತು. ನಂತರ ಬಂಧು ಮಿತ್ರರ ಒತ್ತಾಸೆಯಿಂದ ಪ್ರಣವ್ ತನ್ನ ಮನೋಸ್ಥೈರ್ಯದಿಂದ ದೇಹದ ದೌರ್ಬಲ್ಯವನ್ನು ನೀಗಿಸಿಕೊಂಡ. ಮಾರ್ಚ್ 4, 2022 ರಂದು, ಪ್ರಣವ್ ಅವರು ತಿರುವನಂತಪುರಂ ಮೂಲದ ಶಹಾನಾ ಅವರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು. ಪ್ರಣವ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‍ಗಳು ಮತ್ತು ವೀಡಿಯೊಗಳಿಂದ ಶಹಾನಾ ಪ್ರಭಾವಿತರಾಗಿದ್ದರು. ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರೂ ಪ್ರಣವ್ ಅದನ್ನು ಮೊದಲು ನಿರಾಕರಿಸಿ ತನ್ನ ಸಮಸ್ಯೆಗಳ ಬಗ್ಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದನು. ಆದರೆ ಶಹಾನಳ ನಿರ್ಧಾರ ಬದಲಾಗದ ಕಾರಣ ಹಲವು ಆಕ್ಷೇಪಗಳನ್ನು ಮೆಟ್ಟಿ ನಿಂತು ಇಬ್ಬರೂ ಒಂದಾದರು.
ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಕಾರು ಅಪಘಾತದಲ್ಲಿ ಗಾಯಗೊಂಡು ಇದೇ ಪರಿಸ್ಥಿತಿಯಲ್ಲಿದ್ದ ಅನೇಕರಿಗೆ ಪ್ರಣವ್ ಸ್ಫೂರ್ತಿಯೂ ಆಗಿದ್ದರು. ಮನಪರಂಬಿಲ್ ಸುರೇಶ್ ಬಾಬು ಮತ್ತು ಸುನೀತಾ ದಂಪತಿಯ ಪುತ್ರರಾಗಿದ್ದರು.
ಶಹಾನಾಳನ್ನು ಒಬ್ಬಂಟಿಯಾಗಿಸಿ ಮರೆಯಾದ ಪ್ರಣವ್: ರಕ್ತ ವಾಂತಿಗೈದು ಪ್ರಣವ್ ಮೃತ್ಯು
0
ಫೆಬ್ರವರಿ 17, 2023