ಕಾಸರಗೋಡು: ಇಂಧನದ ಮೇಲೆ ಹೆಚ್ಚಿಸಿರುವ ಸೆಸ್ ಹಿಂತೆಗೆಯುವುದರ ಜತೆಗೆ ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸುವಂತೆ ಆಗ್ರಹಿಸಿ ಖಾಸಗಿ ಬಸ್ ಆಪರೇಟರ್ಸ್ ಫೇಡರೇಶನ್ ಸರ್ಕಾರವನ್ನು ಆಗ್ರಹಿಸಿದೆ. ಮಾ. 31ರ ಮುಮಚಿತವಾಗಿ ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸದಿದ್ದರೆ, ಏಪ್ರಿಲ್ ಮೊದಲ ವಾರದಿಂದ ರಾಜ್ಯಮಟ್ಟದಲ್ಲಿ ಮುಷ್ಕರ ಆರಂಭಿಸಲಾಗುವುದು ಎಂದೂ ಫೆಡರೇಶನ್ ಪದಾಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಕನಿಷ್ಠ ಪ್ರಯಾಣದರ 5ರೂ. ನಿಗದಿಪಡಿಸುವಂತೆ ಫೆಡರೇಶನ್ ಆಗ್ರಹಿಸಿದೆ. ಈ ಎಲ್ಲ ಬೇಡಿಕೆ ಮುಂದಿರಿಸಿ ಫೆ. 28ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸುವುದಾಗಿ ಫೆಡರೇಶನ್ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಧನ ಸೆಸ್ ಕಡಿತ, ವಿದ್ಯಾರ್ಥಿ ಪ್ರಯಾಣ ದರ ಹೆಚ್ಚಳಕ್ಕೆ ಬಸ್ ಆಪರೇಟರ್ಸ್ ಫೆಡರೇಶನ್ ಆಗ್ರಹ
0
ಫೆಬ್ರವರಿ 16, 2023