ಕಾಸರಗೋಡು: ಕೇರಳ-ಕರ್ನಾಟಕ ಗಡಿಭಾಗದ ತಲಪ್ಪಾಡಿಯಲ್ಲಿರುವ ಪೆಟ್ರೋಲ್ ಪಂಪ್‍ಗಳಲ್ಲಿ ವಾಹನ ಮಾಲೀಕರನ್ನು ಸೆಳೆಯಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಟು ರೂಪಾಯಿ ಕಡಿಮೆ ಎಂಬ ಬೋರ್ಡ್ ಹಾಕಿಕೊಂಡು ನೌಕರರು ಪ್ರಚಾರ ನಡೆಸುತ್ತಿದ್ದಾರೆ. ದಿನಗಳ ಹಿಂದೆ ಕೇರಳ ರಾಜ್ಯ ಬಜೆಟ್ ನಲ್ಲಿ ಪೆಟ್ರೋಲ್-ಡೀಸೆಲ್ ಗೆ ಅಧಿಕ ಸೆಸ್ ವಿಧಿಸಿದ್ದರ ಭಾಗವಾಗಿ ಈ ನಾಟಕೀಯತೆ ಸೃಷ್ಟಿಯಾಗಿದೆ. ಆದರೆ ಹೆಚ್ಚಳಗೊಂಡ ಸೆಸ್ ಇನ್ನೂ ಜಾರಿಗೆ ಬಂದಿಲ್ಲ ಎಂದು ತಿಳಿದುಬಂದಿದೆ.
ಕಾಸರಗೋಡಿನ ಜನರು ಜಿಲ್ಲೆಯ ಪೆಟ್ರೋಲ್ ಪಂಪ್‍ಗಳಿಗೆ ತೆರಳುವುದನ್ನು ಬಹುತೇಕ ಕೈಬಿಡುತ್ತಿರುವುದು ಕಂಡುಬಂದಿದೆ. ಇಂಧನ ತುಂಬಲು ತಲಪ್ಪಾಡಿ ಮತ್ತು ಗಾಳಿಮುಖ ಪಂಪ್ ಗಳನ್ನು ಅವಲಂಬಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಶೇ.25ರಿಂದ 30ರಷ್ಟು ಕುಸಿತವಾಗಿದೆ ಎನ್ನುತ್ತಾರೆ ವಿತರಕರು.
ಕೇರಳಕ್ಕಿಂತ ಲೀಟರ್ ಪೆಟ್ರೋಲ್ ಗೆ 6 ರೂಪಾಯಿ ಕಡಿಮೆ ಮತ್ತು ಡೀಸೆಲ್ 8 ರೂಪಾಯಿ ಕಡಿಮೆ ಬೆಲೆ ಕರ್ನಾಟಕದಲ್ಲಿದೆ.
ಉಪ್ಪಳ, ಹೊಸಂಗÀಡಿ, ಮಂಜೇಶ್ವರ, ಮುಳ್ಳೇರಿಯ, ಬೆಳ್ಳೂರು ಪ್ರದೇಶದ ಆಟೋರಿಕ್ಷಾಗಳ ಸಹಿತ ಇತರ ವಾಹನಗಳು, ಖಾಸಗಿ ಬಸ್ಸುಗಳು ಈ ರಿಯಾಯಿತಿಯಲ್ಲಿ ಗಡಿ ಪ್ರದೇಶದ ಕರ್ನಾಟಕ ವ್ಯಾಪ್ತಿಯ ಪಂಪ್ ಗಳಿಗೆ ತೆರಳುತ್ತಿರುವುದು ಕಂಡುಬಂದಿದೆ.
ಎಂಟು ರೂ. ಕಡಿಮೆ ದರದಲ್ಲಿ ಇಂಧನ ಲಭ್ಯತೆ ಎಂಬ ಪ್ರಚಾರ; ಕರ್ನಾಟಕದ ಪಂಪ್ ಗಳಿಗೆ ಮುಗಿಬೀಳುತ್ತಿರುವ ವಾಹನಗಳು
0
ಫೆಬ್ರವರಿ 08, 2023