ಕಾಸರಗೋಡು: ಪ್ರತಿಯೊಬ್ಬರಲ್ಲೂ ಹುಟ್ಟಿನಿಂದಲೇ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಸುಪ್ತ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಸೂಕ್ತ ವೇದಿಕೆ, ಪೆÇ್ರೀತ್ಸಾಹ ಅತ್ಯಗತ್ಯ. ಈ ನಿಟ್ಟಿನಲ್ಲಿ ರಂಗಚಿನ್ನಾರಿ ಕಲ್ಪಿಸಿರುವ ನಾರಿ ಚಿನ್ನಾರಿ ವೇದಿಕೆ ಶ್ಲಾಘನೀಯ ಹಾಗು ಅಭಿನಂದನೀಯ ಎಂದು ಖ್ಯಾತ ವೈದ್ಯೆ ಡಾ.ಜಯಶ್ರೀ ನಾಗರಾಜ್ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕವಾದ ನಾರಿ ಚಿನ್ನಾರಿಯನ್ನು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಲೆ, ಸಂಸ್ಕøತಿ ಪೆÇೀಷಣೆ ಮಾಡುತ್ತಿರುವ ರಂಗಚಿನ್ನಾರಿ ಇದೀಗ ನಾರಿ ಚಿನ್ನಾರಿ ಮಹಿಳಾ ಘಟಕದ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಬೆಳಕಿಗೆ ಬರಲು ಈ ವೇದಿಕೆ ಸೂಕ್ತ ಎಂದರು.
ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸ`Á ಕೌನ್ಸಿಲರ್ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ಕಲಾವಿದೆ ಮತ್ತು ಚಲನಚಿತ್ರ ನಟಿ ರಂಜಿತಾ ಶೇಟ್ ಅವರು ಮಾತನಾಡಿ ನಾರಿ ಚಿನ್ನಾರಿಯಂತಹ ವೇದಿಕೆ ಎಲ್ಲೆಡೆ ರೂಪುಗೊಳ್ಳಬೇಕು. ಈ ಮೂಲಕ ಮನೆಯಲ್ಲೇ ಉಳಿದುಕೊಂಡಿರುವ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಾವಿದೆ ಹಾಗು ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ಗೀತಾ ರಾಮಚಂದ್ರ ಶೆಣೈ ಅವರು ಮಾತನಾಡಿ ನಾರಿ ಚಿನ್ನಾರಿ ವೇದಿಕೆಯ ಮುಖಾಂತರ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಮುಂದೆ ತರುವ ಪ್ರಯತ್ನ ಮೆಚ್ಚುವಂತಹದ್ದು ಎಂದರು. ಇದೇ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಿಸುತಿರುವ ಸವಿತಾ ಟೀಚರ್ ಅವರನ್ನು ರಂಗಚಿನ್ನಾರಿ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ರಂಗಚಿನ್ನಾರಿಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಸತ್ಯನಾರಾಯಣ, ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ಗೀತಾ ಎಂ.ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಲತಾ ಟೀಚರ್ ವಂದಿಸಿದರು.
ಪ್ರತಿಭಾ ಸಿಂಚನ : ನಾರಿ ಚಿನ್ನಾರಿ ಉದ್ಘಾಟನೆಯ ಬಳಿಕ ದೀಯಾ ಶೆಣೈ ಬೀರಂತಬೈಲ್(ಅಭಿನಯ ನೃತ್ಯ), ರಕ್ಷಾ ಸರ್ಪಂಗಳ(ಭಕ್ತಿಗೀತೆ), ಆದ್ಯಂತ ಅಡೂರು(ತಬಲಾ ಸಹಿತ ಭಾವ ಗಾಯನ), ಕನಿಹ ಅನಂತಪುರ(ಜಾನಪದ ನೃತ್ಯ), ಸುನಂದಾ, ಅಶ್ವಿತಾ ಬೆದ್ರಡ್ಕ ಕಂಬಾರು(ಕೀರ್ತನೆ), ಲಲಿತಾ ಉಪ್ಪಳ(ಶೋಭಾನೆ ಹಾಡು), ಪ್ರಣಮ್ಯ ನೀರ್ಚಾಲು(ಕವನ ವಾಚನ), ಶಿವ ಕುಮಾರ್ ನಾಯ್ಕಾಪು ಕುಂಬ್ಳೆ(ತಬಲಾ ವಾದನ), ರಮ್ಯಾ ರಾವ್ ಬಳಗ ಕಾಸರಗೋಡು(ಯಕ್ಷಗಾನ), ಅನ್ವಿತಾ ಕಾಮತ್ ಕಾಸರಗೋಡು(ಕೀರ್ತನೆ), ಗೌರಿ ಪ್ರಿಯ ಅಣಂಗೂರು(ಶಾಸ್ತ್ರೀಯ ಸಂಗೀತ), ಮೇಧಾ ನಾಯರ್ಪಳ್ಳ(ಕಾವ್ಯವಾಚನ) ಮೊದಲಾದವರಿಂದ ಪ್ರತಿಭಾ ಸಿಂಚನ ನಡೆಯಿತು.
ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ ಅಗತ್ಯ : ಡಾ.ಜಯಶ್ರೀ ನಾಗರಾಜ್ : ನಾರಿ ಚಿನ್ನಾರಿಯ ಸಮಾರಂಭ ಉದ್ಘಾಟಿಸಿ ಅಭಿಮತ
0
ಫೆಬ್ರವರಿ 21, 2023
Tags