ತಿರುವನಂತಪುರಂ: ಸರ್ಕಾರ ಕುಡಿಯುವ ನೀರು ಪೂರೈಕೆಯನ್ನು ಕೈಬಿಡುತ್ತಿದೆ. ತಿರುವನಂತಪುರಂ ಮತ್ತು ಕೊಚ್ಚಿ ಕಾಪೆರ್Çರೇಷನ್‍ಗಳಲ್ಲಿ ಕುಡಿಯುವ ನೀರು ಪೂರೈಕೆಯನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಭಾಗವಾಗಿ ಪ್ರಾಥಮಿಕ ಚರ್ಚೆಗಾಗಿ ಎಡಿಬಿಯ ನಿಯೋಗ ಕೇರಳಕ್ಕೆ ತಲುಪಿದೆ.
ಕುಡಿಯುವ ನೀರು ಪೂರೈಕೆಯನ್ನು ಖಾಸಗೀಕರಣಗೊಳಿಸುವ ಯೋಜನೆಯ ಪೂರ್ವಭಾವಿ ಸಭೆಯು ಕೊಚ್ಚಿಯಲ್ಲಿ ನಡೆಯಿತು.
ಎಡಿಬಿ ವಲಯ ಮುಖ್ಯಸ್ಥ ಹಿಕಾರು ಶೋಜು ನೇತೃತ್ವದ ಐವರು ಸದಸ್ಯರ ತಂಡ ಆಗಮಿಸಿದೆ. ಜಲ ಪ್ರಾಧಿಕಾರದ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಎಸ್.ವೆಂಕಟೇಶಪತಿ, ಕೇಂದ್ರ ವಲಯ ಮುಖ್ಯ ಎಂಜಿನಿಯರ್ ಟಿ.ಎಸ್.ಸುಧೀರ್, ಅಧೀಕ್ಷಕ ಎಂಜಿನಿಯರ್ ಸಜೀವ್ ರತ್ನಾಕರನ್, ಉಪ ಮುಖ್ಯ ಎಂಜಿನಿಯರ್‍ಗಳು, ಯೋಜನಾ ಅನುಷ್ಠಾನ ಘಟಕದ ಎಂಜಿನಿಯರ್‍ಗಳು ಮುಂತಾದವರು ಭಾಗವಹಿಸಿದ್ದರು.
ಉರಾಲುಂಗಲ್ ಲೇಬರ್ ಕಾಂಟ್ರಾಕ್ಟ್ ಸೊಸೈಟಿ, ಸ್ಯೂಸ್ ಇಂಟರ್‍ನ್ಯಾಶನಲ್, ಕೋಯಾ ಮತ್ತು ಕಂಪನಿ ಮತ್ತು ಎಲ್ & ಟಿ ಸೇರಿದಂತೆ ಸುಮಾರು ಏಳು ಕಂಪನಿಗಳು ಸಭೆಯಲ್ಲಿ ಭಾಗವಹಿಸಿದ್ದವು. ಟೆಂಡರ್ ಕುರಿತು ಕಂಪನಿಗಳ ಸಂದೇಹಗಳಿಗೆ ಎಡಿಬಿ ಮತ್ತು ಜಲ ಪ್ರಾಧಿಕಾರ ಸ್ಪಂದಿಸಿದೆ. ನಾಳೆ ತಿರುವನಂತಪುರಂಗೆ ಆಗಮಿಸುವ ತಂಡ ಜಲ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ. ಶುಕ್ರವಾರದ ವರೆಗೆ ತಂಡ ರಾಜಧಾನಿಯಲ್ಲಿರಲಿದೆ.
2510 ಕೋಟಿ ಯೋಜನೆ, 1757 ಕೋಟಿ ಎಡಿಬಿ ಸಾಲ ಮತ್ತು 753 ಕೋಟಿ ರಾಜ್ಯ ಸರ್ಕಾರದ ಪಾಲು. ನಾಲ್ಕು ಹಂತದ ಯೋಜನೆಯು ಕೊಚ್ಚಿಯಲ್ಲಿ ಮೊದಲು ಅನುμÁ್ಠನಗೊಳ್ಳಲಿದೆ. ಎರಡನೇ ಹಂತದಲ್ಲಿ ತಿರುವನಂತಪುರದ ಕುಡಿಯುವ ನೀರು ಸರಬರಾಜು ಜಾಲವನ್ನು ಸುಧಾರಿಸಲಾಗುವುದು. ಆಲುವಾ ಮತ್ತು ಅರುವಿಕಾರದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಮೂರು ಮತ್ತು ನಾಲ್ಕನೇ ಹಂತದಲ್ಲಿ ಮೇಲ್ದರ್ಜೆಗೇರಿಸಲಾಗುವುದು. 10 ವರ್ಷಗಳ ಕಾಲ ಇದೆಲ್ಲದರ ಉಸ್ತುವಾರಿಯನ್ನು ಖಾಸಗಿ ಕಂಪನಿ ನೋಡಿಕೊಳ್ಳಲಿದೆ.
ಕುಡಿಯುವ ನೀರು ಪೂರೈಕೆ ಕೈಬಿಡಲಿರುವ ಸರ್ಕಾರ: ತಿರುವನಂತಪುರಂ ಮತ್ತು ಕೊಚ್ಚಿ ಕಾಪೆರ್Çರೇಷನ್‍ಗಳಲ್ಲಿ ಖಾಸಗಿ ಕಂಪನಿಗೆ ಕುಡಿಯುವ ನೀರು ಸರಬರಾಜು: ಟೆಂಡರ್ ಗೆಲ್ಲಲು ಉರಾಲುಂಗಲ್ ಮತ್ತು ಎಲ್ & ಟಿ ಮಧ್ಯೆ ಸ್ಪರ್ಧೆ:
0
ಫೆಬ್ರವರಿ 22, 2023