ತಿರುವನಂತಪುರ: ಲೈಫ್ ಮಿಷನ್ ಭ್ರμÁ್ಟಚಾರ ಪ್ರಕರಣದಲ್ಲಿ ಇಡಿ ಕ್ರಮಗಳು ಕೇಂದ್ರೀಯ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಬಲಪಡಿಸಿದೆ ಎಂದು ಕೆಂದ್ರ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ. ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರನ್ ಬಂಧನದ ಬಳಿಕ ಫೇಸ್ ಬುಕ್ ಪೋಸ್ಟ್ ಮೂಲಕ ಕೇಂದ್ರ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಭ್ರμÁ್ಟಚಾರ ಮತ್ತು ಕಪ್ಪುಹಣ ವ್ಯವಹಾರದಲ್ಲಿ ತೊಡಗಿರುವವರು ಎμÉ್ಟೀ ಉನ್ನತ ಹುದ್ದೆಯಲ್ಲಿದ್ದರೂ ಅವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂಬ ನರೇಂದ್ರ ಮೋದಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವ ಹೆಜ್ಜೆಯೂ ಇದಾಗಿದೆ. ಪ್ರಕರಣ ಎಲ್ಲಿಗೆ ಹೋಯಿತು ಎಂದು ಕೇಳಿದವರು, ಮಧ್ಯವರ್ತಿಗಳು ಒಪ್ಪಿಗೆ ನೀಡದಿದ್ದರೆ ಈಗ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. ಪಿಣರಾಯಿ ವಿಜಯನ್ ಅವರ ಆಪ್ತರು ನಡೆಸಿದ ಲಂಚದ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಪಿಣರಾಯಿ ವಿಜಯನ್ ಒಬ್ಬ ಮೂರ್ಖ ಮತ್ತು ಅಸಮರ್ಥ ಆಡಳಿತಗಾರ ಎಂದು ಕೇಂದ್ರ ಸಚಿವರು ಟೀಕಿಸಿದರು, ಅವರ ಸರ್ಕಾರದ ಅಡಿಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಏನೂ ತಿಳಿಯದಷ್ಟು ಮೌಡ್ಯ ಅವರಲ್ಲಿದೆ ಎಂದು ಮುರಳೀಧರನ್ ಟೀಕಿಸಿರುವರು.
ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆಯಲ್ಲಿ ತೊಡಗಿರುವವರು, ಎμÉ್ಟೀ ಉನ್ನತ ಮಟ್ಟದ ವ್ಯಕ್ತಿಗಳಾಗಿದ್ದರೂ, ಶಿಕ್ಷೆಯಿಂದ ಹೊರತಲ್ಲ|: ಪಿಣರಾಯಿ ಕೂಡ ಲಂಚದಲ್ಲಿ ಭಾಗಿ: ಅಥವಾ ಅಜ್ಞಾನಿ, ಮೂರ್ಖ: ವಿ.ಮುರಳೀಧರನ್
0
ಫೆಬ್ರವರಿ 15, 2023