ದೆಹಲಿ: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ
ಹಾಗೂ ಟಿಕೆಟ್ ವಿಭಾಗವು ಡಿಸೆಂಬರ್ ತ್ರೈಮಾಸಿಕದ ಒಟ್ಟು ನಿವ್ವಳ ಲಾಭದ ಲೆಕ್ಕ ಮಾಡಿದೆ.
ಕಳೆದ ವರ್ಷಕ್ಕಿಂತ ಶೇ.22.8 ರಷ್ಟು ಆದಾಯ ಈ ವರ್ಷ ಹೆಚ್ಚು ಸಂಗ್ರಹವಾಗಿದೆ ಎಂದು
ತಿಳಿಸಿದೆ.
ಹಿಂದಿನ ವರ್ಷ ಇದೇ ಅವಧಿಯಲ್ಲಿ 208 ಕೋಟಿ ರೂಪಾಯಿ ನಿವ್ವಳ ಆದಾಯ ಬಂದಿದ್ದು, ಈ
ಡಿಸೆಂಬರ್ ತ್ರೈಮಾಸಿಕದಲ್ಲಿ 256 ಕೋಟಿ ರೂ. ಏಕೀಕೃತ ನಿವ್ವಳ ಲಾಭ ಅಂದರೆ ಒಟ್ಟು
22.8ರಷ್ಟು ಆದಾಯ ಏರಿಕೆ ಕಂಡಿದೆ.
ಇನ್ನೂ ರೈಲ್ವೆ ಪ್ರವಾಸೋದ್ಯಮ ಕಾರ್ಯಾಚರಣೆಗಳಿಂದ ಈ ವರ್ಷ ಶೇಕಡಾ 70 ರಷ್ಟು
ಹೆಚ್ಚಳ ಕಏರಿಕೆಯಾಗಿ ₹918 ಕೋಟಿಗಳಿಗೆ ತಲುಪಿದೆ, ಕಳೆದ ಹಣಕಾಸು ವರ್ಷದ ಇದೇ
ತ್ರೈಮಾಸಿಕದಲ್ಲಿ 540 ಕೋಟಿ ರೂಪಾಯಿ ಇತ್ತು.
ತ್ರೈಮಾಸಿಕದಲ್ಲಿ ಒಟ್ಟು ವೆಚ್ಚಗಳು ಎಲ್ಲವು ದ್ವಿಗುಣಗೊಂಡಿವೆ. ಕಳೆ ದ ವರ್ಷ
ಹಿಂದಿನ ಇದೇ ಅವಧಿಯಲ್ಲಿ ರೂ.274 ಕೋಟಿಗೆ ಹೋಲಿಸಿದರೆ ಈ ವರ್ಷ ಶೇಕಡಾ 121ರಷ್ಟು ಭಾರಿ
ಹೆಚ್ಚಳ ಅಂದರೆ 607 ಕೋಟಿ ರೂ.ಗೆ ಏರಿಕೆ ಆಗಿದೆ ಎಂದು ಭಾರತೀಯ ರೈಲ್ವೆ ಅಡುಗೆ ಮತ್ತು
ಪ್ರವಾಸೋದ್ಯಮ ನಿಗಮ (IRCTC) ತಿಳಿಸಿದೆ.
ನಿಗಮವು ಪ್ರತಿಯೊಂದು ಷೇರಿಗೆ 3.50 ರೂಪಾಯಿಯ ಮಧ್ಯಂತರ ಲಾಭಾಂಶ ಘೋಷಿಸಲಾಗಿದೆ.
ಪಾವತಿಸಿದ ಷೇರು ಬಂಡವಾಳದ ಒಟ್ಟು ಹಣ 160 ಕೋಟಿ ರೂಪಾಯಿ, ಅಂದರೆ ಶೇಕಡಾ 175% ರಷ್ಟು
ಎಂದು ತಿಳಿದು ಬಂದಿದೆ. ಕಂಪನಿಯು ಕಳೆದ ವರ್ಷದ ಆರ್ಥಿಕ ಸಾಲಿಗೆ (2022-23)
ಲಾಭಾಂಶವನ್ನು ಪಾವತಿಸುವ ಉದ್ದೇಶಕ್ಕಾಗಿ 22 ಫೆಬ್ರವರಿ 2023 ಬುಧವಾರ ಅನ್ನು ದಾಖಲೆ
ದಿನಾಂಕವಾಗಿ ನಿಗದಿ ಮಾಡಿದೆ.
ನಿಗಮದ (IRCTC) ಇಂಟರ್‌ನೆಟ್ ಟಿಕೆಟಿಂಗ್ ವ್ಯವಹಾರ ಬಿಟ್ಟು ಎಲ್ಲಾ
ವಿಭಾಗಗಳಿಂದಲೂ ಅತ್ಯಧಿಕ ಆದಾಯ ಗಳಿಸಿದೆ. ಅದನ್ನು ನೋಡುವುದಾದರೆ ಡಿಸೆಂಬರ್
ತ್ರೈಮಾಸಿಕದಲ್ಲಿ 301 ಕೋಟಿ ರೂಪಾಯಿ ಆದಾಯ ಪೈಕಿ ಶೇಕಡಾ 4ರಷ್ಟು ಕುಸಿತ ಕಂಡಿದೆ. ಇದರ
ಪ್ರಮಾಣ ಹಿಂದಿನ ವರ್ಷ (313 ಕೋಟಿ ರೂ.) ಉತ್ತಮವಾಗಿತ್ತು ಎನ್ನಲಾಗಿದೆ.