ಕಾಸರಗೋಡು: ಹೋಟೆಲ್ ನಲ್ಲಿ ಹಾಲ್ ಟಿಕೆಟ್ ಮರೆತ ವಿದ್ಯಾರ್ಥಿನಿಯರಿಗೆ ಪೆÇಲೀಸರು ನೆರವಾದ ಅಪೂರ್ವ ಸನ್ನಿವೇಶಕ್ಕೆ ಕಾಸರಗೋಡು ಸಾಕ್ಷಿಯಾಯಿತು.
ಪರೀಕ್ಷೆಗೆ ತೆರಳುವ ಮಧ್ಯೆ ಹೋಟೇಲ್ ಗೆ ತೆರಳಿ ಮರಳುವಾಗ ವಿದ್ಯಾರ್ಥಿಗಳು ಬಿಟ್ಟು ಹೋಗಿದ್ದ ಹಾಲ್ ಟಿಕೆಟ್‍ನೊಂದಿಗೆ ಪೊಲೀಸ್ ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದರು. ಘಟನೆ ಹೀಗಿದೆ (ಕೇರಳ ಪೆÇಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ)...
ಪಯ್ಯಂಗಡಿಯ ಮಾಟುಲ್ ಇರ್ಫಾನಿಯಾ ಜೂನಿಯರ್ ಅರೇಬಿಕ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಯ್ಯನ್ನೂರು, ತಳಿಪರಂಬ ಮತ್ತು ಪಿಲತ್ತಾರದ ನಿವಾಸಿಗಳಾದ ಮುಹಮ್ಮದ್ ಸಹಲ್, ಕೆ.ಕೆ.ಅನ್ಶಾದ್, ಎಂ.ಅನಾಸ್, ಒ.ಪಿ.ಶಹಬಾಝ್ ಮತ್ತು ಎಂ.ಪಿ.ನಿಹಾಲ್ ಚಟ್ಟಂಚಾಲ್‍ನ ಮಲಬಾರ್ ಇಸ್ಲಾಮಿಕ್ ಶಾಲೆಗೆ ಹಾಜರಾಗುವ ವೇಳೆ ತಮ್ಮ ಹಾಲ್ ಟಿಕೆಟ್ ಕಳೆದುಕೊಂಡಿದ್ದಾರೆ. ಎಸ್‍ಎಸ್‍ಎಲ್‍ಸಿ ರಸಾಯನಶಾಸ್ತ್ರ ಪರೀಕ್ಷೆ ಶುಕ್ರವಾರ ನಡೆದಿತ್ತು.
ಮಾವೇಲಿ ಎಕ್ಸ್ ಪ್ರೆಸ್ ನಲ್ಲಿ ಕಾಸರಗೋಡಿನಲ್ಲಿ ಇಳಿದ ವಿದ್ಯಾರ್ಥಿಗಳು ಹೊಸ ಬಸ್ ನಿಲ್ದಾಣ ತಲುಪಿ ಹೋಟೆಲ್ ಗೆ ಚಹಾ ಸೇವಿಸಲು ತೆರಳಿದರು. ಅಷ್ಟರಲ್ಲಿ ಚಟ್ಟಂಚಾಲ್ ಗೆ ಬಸ್ ಬಂತು. ತರಾತುರಿಯಲ್ಲಿ ಬಸ್ ಹತ್ತಿದ ವಿದ್ಯಾರ್ಥಿಗಳು 12 ಕಿ.ಮೀ ನಂತರ ಚಟ್ಟಂಜಾಲ್ ನಲ್ಲಿ ಇಳಿದಾಗ ಬ್ಯಾಗ್ ನಾಪತ್ತೆಯಾಗಿರುವುದು ಕಂಡು ಬಂದಿದೆ. ಆ ಬ್ಯಾಗ್‍ನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಐವರು ವಿದ್ಯಾರ್ಥಿಗಳ ಹಾಲ್‍ಟಿಕೆಟ್ ಇತ್ತು. ಬೆಳಗ್ಗೆ 9.30ರೊಳಗೆ ಹಾಲ್ ಟಿಕೆಟ್ ಸಿಗದಿದ್ದರೆ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಅμÉ್ಟೂತ್ತಿಗೆ ಗಂಟೆ ಒಂಬತ್ತಾಗಿತ್ತು.
ಗಾಬರಿಗೊಂಡ ವಿದ್ಯಾರ್ಥಿಗಳು ಮೇಲ್ಪರಂಬ ಪೊಲೀಸ್ ಠಾಣೆಗೆ ಧಾವಿಸಿ ಮಾಹಿತಿ ನೀಡಿದ್ದಾರೆ. ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಪ್ರದೀಪನ್ ಮತ್ತು ಸಿಪಿಒ ಶ್ರೀಜಿತ್ ಅವರು ನಿಯಂತ್ರಣ ಕೊಠಡಿಗೆ ಮತ್ತು ಅಲ್ಲಿಂದ ಸ್ಟ್ರೈಕರ್ ಪೋರ್ಸ್ ಅಧಿಕಾರಿ ಪಿ.ವಿ.ನಾರಾಯಣನ್‍ಗೆ ಮಾಹಿತಿ ರವಾನಿಸಿದರು. ಕೂಡಲೇ ಸ್ಟ್ರೈಕರ್ ಪೋರ್ಸ್‍ನ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಅರುಣ್ ಮತ್ತು ಮುಖೇಶ್ ಚಟ್ಟಂಚಾಲ್‍ಗೆ ಧಾವಿಸಿದರು.
ಸಮಯದ ಮೌಲ್ಯ ತಿಳಿದ ಪೊಲೀಸರು ವಿದ್ಯಾರ್ಥಿಗಳು ಚಹಾ ಸೇವಿಸಿದ ಹೋಟೆಲ್‍ಗೆ ತೆರಳಿ ಬ್ಯಾಗ್ ಪತ್ತೆಮಾಡಿದರು. ಮೇಲ್ಪರಂ ಠಾಣೆಯಿಂದ ಪೆÇಲೀಸ್ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲಾಯಿತು. ಅಳಲು ತೋಡಿಕೊಂಡ ಮಕ್ಕಳು ಪೊಲೀಸರಿಗೆ ಧನ್ಯವಾದ ಹೇಳಿ ಪರೀಕ್ಷಾ ಕೊಠಡಿ ಪ್ರವೇಶಿಸಿದರು. ಪರೀಕ್ಷೆ ಬರೆದ ನಂತರ ಈ ಮಕ್ಕಳು ಪೆÇಲೀಸ್ ಠಾಣೆಗೆ ಆಗಮಿಸಿ ಸಿಹಿತಿಂಡಿ ನೀಡಿ ಪಜಂಗಡಿಗೆ ಮರಳಿದರು. ಪೆÇಲೀಸರ ಈ ಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶ್ಲಾಘಿಸಿದ್ದಾರೆ.
ಕಾಸರಗೋಡಲ್ಲಿ ಹೀಗೊಂದು ಘಟನೆ: ವಿದ್ಯಾರ್ಥಿಗಳು ಹೋಟೆಲ್ ನಲ್ಲಿ ಮರೆತಿದ್ದ ಹಾಲ್ ಟಿಕೆಟ್ ಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ 12 ಕಿ.ಮೀ.ದೂರ ಧಾವಿಸಿದ ಪೊಲೀಸ್ ಅಧಿಕಾರಿಗಳು; ಪೆÇಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ
0
ಮಾರ್ಚ್ 18, 2023