ಗಾಂಧಿನಗರ: ಗುಜರಾತ್ ಸರ್ಕಾರ ಕಳೆದ ಎರಡು ವರ್ಷಗಳ ವಿದ್ಯುತ್ ಸಬ್ಸಿಡಿಯಾಗಿ ರೈತರಿಗೆ ₹12,757 ಕೋಟಿ ಪಾವತಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಬ್ಸಿಡಿ ನೀಡಲು ₹10,970 ಕೋಟಿ ಮೀಸಲಿಟ್ಟಿದೆ ಎಂದು ಶನಿವಾರ ರಾಜ್ಯದ ವಿಧಾನಸಭೆ ಮಾಹಿತಿ ನೀಡಿದೆ.
'ಕೃಷಿ ಉದ್ದೇಶಕ್ಕೆ ಬಳಸುವ ಪ್ರತಿ ಎಚ್‌ಪಿ(ಹಾರ್ಸ್ ಪವರ್) ವಿದ್ಯುತ್ ಬಳಕೆಗೆ ವಾರ್ಷಿಕ ₹2,400 ತೆರಿಗೆ ವಿಧಿಸಲಾಗುತ್ತಿದೆ. ಈ ಪೈಕಿ ರೈತರು ಕೇವಲ ₹665 ಪಾವತಿಸುತ್ತಾರೆ. ಉಳಿದ ₹1,735 ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ' ಎಂದು ಇಂಧನ ಸಚಿವ ಕಾನು ದೇಸಾಯಿ ತಿಳಿಸಿದರು.